ಪುತ್ತೂರು ಹಿರಿಯ ಕಾಂಗ್ರೆಸ್ ಮುಖಂಡ ಮೇಗಿನಗುತ್ತು ವಿಶ್ವನಾಥ ರೈ ನಿಧನ

Share the Article

ಪುತ್ತೂರು : ಹಿರಿಯ ಕಾಂಗ್ರೆಸ್ ಮುಖಂಡ,ಮುಂಡೂರು ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ ರೈ ಮೇಗಿನಗುತ್ತು(76.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಆ.26ರಂದು ರಾತ್ರಿ ನಿಧನರಾದರು.

ಹದಿನೈದು ವರ್ಷಗಳ ಕಾಲ ಮಂಡೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಗತಿಪರ ಕೃಷಿಕರಾಗಿದ್ದ ವಿಶ್ವನಾಥ ರೈ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಗೀತಾ ಪುತ್ರರಾದ ರಾಜೇಶ್ ರೈ, ಸುದೇಶ್ ರೈ, ಪುತ್ರಿ ಸವಿತಾ, ಅಳಿಯ ನಿವೃತ್ತ ಸೈನಿಕ ಪ್ರದೀಪ್ ರೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave A Reply