ಪ್ರಕಾಶ್ ರಾಜ್ ಗೆ ಈಗಿರುವ ಹೆಂಡತಿಯ ಜತೆಗೆ ಮತ್ತೊಮ್ಮೆ ಮದುವೆ | ಯಾಕಿರಬಹುದು ಇನ್ನೊಂದು ಸಲ ಮದುವೆಯಾಗುವ ಮರ್ಲ್ ?!


ಕರಾವಳಿ ಮೂಲದ ನಟ ಪ್ರಕಾಶ್ ರಾಜ್ ಯಾರಿಗೆ ಗೊತ್ತಿಲ್ಲ ಹೇಳಿ. ಮೊದಲು ಪ್ರಕಾಶ್ ರೈ ಆಗಿದ್ದ ನಟ ಈಗ ಪ್ರಕಾಶ್ ರಾಜ್ ಎಂದೇ ಪ್ರಸಿದ್ಧರಾಗಿದ್ದಾರೆ. ತನ್ನ ಅದ್ಭುತ ನಟನೆಯ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಗಳಿಸಿದ್ದಾರೆ. ಈಗ ಅದೇ ಖ್ಯಾತ ನಟ ಪ್ರಕಾಶ್​ ರಾಜ್​ ಮತ್ತೊಮ್ಮೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ.

ಹೌದು, ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಪ್ರಕಾಶ್​ ರಾಜ್​ ಮದುವೆಯದ್ದೇ ಸದ್ದು. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನದಲ್ಲಿ ಮನೆ ಮಾಡಿರುವ ಪ್ರಕಾಶ್​ ರಾಜ್ ಮತ್ತೊಮ್ಮೆ ಮದುವೆಯಾಗಿದ್ದು, ಅವರ ಹೆಂಡತಿಯನ್ನೇ! ಇದಕ್ಕೆ ಕಾರಣ ಬೇರಾರು ಅಲ್ಲ ಅವರ ಮಗನೇ. ತನ್ನ ತಂದೆ-ತಾಯಿಯ ಮದುವೆ ನೋಡಬೇಕೆಂಬ ಮಗನ ಆಸೆಯನ್ನು ನೆರವೇರಿಸಿದ್ದಾರೆ ಈ ದಂಪತಿ !!

ಹೌದು, ತಮ್ಮ ಮಡದಿ ಪೋನಿ ವೆರ್ಮಾ ಅವರನ್ನು ಮತ್ತೊಮ್ಮೆ ಮದುವೆಯಾಗಿ ಸುದ್ದಿಯಲ್ಲಿದ್ದಾರೆ. 11 ವರ್ಷಗಳ ದಾಂಪತ್ಯ ಜೀವನ ನಡೆಸಿರುವ ಪ್ರಕಾಶ್​​ ರಾಜ್​- ಪೋನಿ ವೆರ್ಮಾ ದಂಪತಿಗೆ ವೇದಾಂತ್​ ಎಂಬ ಮಗನಿದ್ದಾನೆ. ಈಗ ಈ ಕ್ಯೂಟ್​ ಕಪಲ್ ಮತ್ತೊಮ್ಮೆ ಮದುವೆಯಾಗಿರುವುದು ಸಹ ತಮ್ಮ ಮಗನಿಗೋಸ್ಕರ ಎಂಬುದು ಸ್ವಾರಸ್ಯಕರ ಸಂಗತಿ.

Ad Widget
Ad Widget

Ad Widget

Ad Widget

ಹೌದು, ಪ್ರಕಾಶ್​ ರಾಜ್​ ತಮ್ಮ ಟ್ವಿಟರ್ ಖಾತೆಯಲ್ಲಿ ಮತ್ತೆ ಮದುವೆಯಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ’ನಮ್ಮ ಮಗನಿಗಾಗಿ ಈ ರಾತ್ರಿ ನಾವು ಮತ್ತೆ ಮದುವೆಯಾದೆವು. ನಮ್ಮ ಮದುವೆಗೆ ಮಗ ವೇದಾಂತ್ ಸಾಕ್ಷಿಯಾಗಿದ್ದ’ ಎಂದು ಬರೆದುಕೊಂಡಿದ್ದಾರೆ.

ಒಂದು ಫೋಟೋದಲ್ಲಿ ಪ್ರಕಾಶ್​ ರಾಜ್​ ದಂಪತಿ ತಮ್ಮ ಮಗನನ್ನು ಸಾಕ್ಷಿಯಾಗಿಟ್ಟುಕೊಂಡು ಮದುವೆಯಾಗಿದ್ದಾರೆ. ಪ್ರಕಾಶ್​ ರಾಜ್ ತಮ್ಮ ಮಡದಿ ಪೋನಿ ವೆರ್ಮಾಗೆ ಉಂಗುರ ತೊಡಿಸಿದ್ದು, ಮಗ ವೇದಾಂತ್ ಆ ವೇಳೆಗೆ ಸಾಕ್ಷಿಯಾಗಿದ್ದಾನೆ. ಈ​ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮತ್ತೊಂದು ಫೋಟೊದಲ್ಲಿ ಪ್ರಕಾಶ್​ ರಾಜ್​-ಪೋನಿ ವೆರ್ಮಾ ಗೆ ಲಿಪ್​ಕಿಸ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಪ್ರಕಾಶ್ ರಾಜ್ ಅವರ ಇಬ್ಬರು ಹೆಣ್ಣು  ಮಕ್ಕಳು ಕೂಡ ಇದ್ದು, ಸಂಪೂರ್ಣ ಕುಟುಂಬ ಸೆರೆಯಾಗಿದೆ.

ಈ ಫೋಟೋಗಳನ್ನು ಹಂಚಿಕೊಂಡಿರುವ ಪ್ರಕಾಶ್​ ರಾಜ್​ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದು, ಮಡದಿ ಪೋನಿ ವೆರ್ಮಿಗೆ ಧನ್ಯವಾದ ಹೇಳಿದ್ದಾರೆ. ಥ್ಯಾಂಕ್ಯೂ ಮೈ ಡಾರ್ಲಿಂಗ್ ವೈಫ್, ಅದ್ಭುತ ಫ್ರೆಂಡ್ ಆಗಿರುವುದಕ್ಕೆ, ಲವರ್ ಆಗಿರುವುದಕ್ಕೆ ಹಾಗೂ ಕೋ-ಟ್ರಾವೆಲರ್​ ಆಗಿ ನನ್ನ ಜೊತೆ-ಜೊತೆಯಲ್ಲಿ ಸಾಗುತ್ತಿರುವುದಕ್ಕೆ ತುಂಬಾ ಥ್ಯಾಂಕ್ಸ್​ ಎಂದು ಪ್ರಕಾಶ್​ ರಾಜ್​ ಹೇಳಿದ್ದಾರೆ.

ಪ್ರಕಾಶ್​ ರಾಜ್​​ಗೆ ತಮ್ಮ 45ನೇ ವಯಸ್ಸಿನಲ್ಲಿ ಪೋನಿ ಮೇಲೆ ಪ್ರೀತಿ ಹುಟ್ಟಿತು. 2010 ರಲ್ಲಿ ತಮ್ಮ ಗೆಳೆಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರೂ ಮದುವೆಯಾದರು. ಪೋನಿ ಸಿನಿಮಾವೊಂದರ ಹಾಡಿಗೆ ಕೋರಿಯಾಗ್ರಫಿಂಗ್ ಮಾಡುವಾಗ ಪ್ರಕಾಶ್​​ ರಾಜ್​​ ಭೇಟಿಯಾಗಿದ್ದರು. ಪ್ರಕಾಶ್​ ತಮ್ಮ ಮೊದಲ ಹೆಂಡತಿ ಲಲಿತಾ ಕುಮಾರಿಯಿಂದ 2009ರಲ್ಲಿ ಬೇರೆಯಾದರು.

ದಕ್ಷಿಣ ಭಾರತದ ಬಹುನಿರೀಕ್ಷಿತ ಕನ್ನಡ ಸಿನಿಮಾ ರಾಕಿಂಗ್​ ಸ್ಟಾರ್ ಯಶ್ ನಟನೆಯ ಕೆಜಿಎಫ್​-2 ಸಿನಿಮಾದಲ್ಲಿ ಪ್ರಕಾಶ್​ ರಾಜ್​ ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 14ಕ್ಕೆ ರಿಲೀಸ್ ಆಗಲಿದೆ.

Leave a Reply

error: Content is protected !!
Scroll to Top
%d bloggers like this: