ಆ.27 : ಕೋವಿಡ್ ವ್ಯಾಕ್ಸಿನೇಷನ್ ಮೇಳ
ಪುತ್ತೂರು: ಮೆಗಾ ಕೋವಿಡ್-19 ಲಸಿಕಾ ಮೇಳ ಆ.27ರಂದು ಕರ್ನಾಟಕ ರಾಜ್ಯಾದ್ಯಂತ ನಡೆಯಲಿದೆ.
ಈ ಮೇಳದಲ್ಲಿ ಇದುವರೆಗೂ ಒಂದೂ ಡೋಸ್ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರ ಮತ್ತು
ಮುಂಚೂಣಿ ಕಾರ್ಯಕರ್ತರ ಶೇ.100 ರಷ್ಟು ಕೋವಿಡ್-19 ಲಸಿಕಾಕರಣ, 2ನೇ ಡೋಸ್‌ಗೆ ಬಾಕಿ ಇರುವ ಆರೋಗ್ಯ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಕರ್ತರ ಶೇ.100 ರಷ್ಟು ಕೋವಿಡ್-19 ಲಸಿಕಾಕರಣ , 60 ವರ್ಷ ಮೇಲ್ಪಟ್ಟವರ 1ನೇ ಡೋಸ್ ಹಾಗೂ 2ನೇ ಡೋಸ್ ವಿಚ್ ಲಸಿಕಾಕರಣ,
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 1 ರಿಂದ 10ನೇ ತರಗತಿ, ಪದವಿ ಬೋರ್ವ ಕಾಲೇಜನ (11ನೇ ಹಾಗೂ 12ನೇ ತರಗತಿ ಆನ್ವಯಿಸುವಲ್ಲ) ಭೋದಕ /ಭೋದಕೇತರ ಸಿಬ್ಬಂದಿಗಳು ಇನ್ನೂ ಕೋವಿಡ್-19 ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ಲಸಿಕಾಕರಣ ನಡೆಯಲಿದೆ.
ಅಲ್ಲದೆ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳ ಕೋವಿಡ್-19 ಲಸಿಕಾಕರಣ ನಡೆಯಲಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.