ಸೂಪ್ ತಯಾರಿಸಲು ಹಾವಿನ ತಲೆ ಕತ್ತರಿಸಿಟ್ಟ ಬಾಣಸಿಗ | 20 ನಿಮಿಷದ ಬಳಿಕ ಸೇಡು ತೀರಿಸಿಕೊಂಡ ಹಾವು | ಅಷ್ಟಕ್ಕೂ ಅಲ್ಲಿ ನಡೆದದ್ದೇನು ??

ಹಾವು ಕಚ್ಚಿ ಸಾಯುವಂತದ್ದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಕಡೆ ವಿಚಿತ್ರ ಘಟನೆ ನಡೆದಿದೆ. ರೆಸ್ಟೋರೆಂಟ್ ನಲ್ಲಿ ಸೂಪ್ ತಯಾರಿಸಲು ಹಾವಿನ ತಲೆ ಕಡಿದಿಟ್ಟ ನಂತರ ಹಾವೇ ಆತನಿಗೆ ಕಚ್ಚಿ ಆತ ಮೃತಪಟ್ಟ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ.
ಹೌದು, ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಫ್ಯಾಶನ್ ಸಿಟಿಯಲ್ಲಿ ವಾಸವಾಗಿರುವ ಬಾಣಸಿಗ ಚೆಂಗ್ ಪೆಂಗ್ಮಾಡುವ ಎಂಬ ವ್ಯಕ್ತಿಯೊಬ್ಬ , ಇಂಡೋ-ಚೈನೀಸ್ ಉಗುಳುವ ನಾಗರಹಾವಿನ ಮಾಂಸದ ಸೂಪ್ ತಯಾರಿಸುತ್ತಿದ್ದ.
ಎಂಥಾ ಅದ್ಭುತ ನೋಡಿ, ನಾವೆಲ್ಲ ಹಾವು ವಿಷ ಎಂದು ಅದರಿಂದ ದೂರ ಇರಲು ಇಚ್ಛೆಸುತ್ತೇವೆ. ಆದರೆ ಚೀನಾದಲ್ಲಿ ವಿಷಕಾರಿ ಹಾವಿನ ಮಾಂಸದ ಸೂಪ್ ಗೆ ಹೆಚ್ಚಿನ ಬೇಡಿಕೆಯಿದೆ ಅಂತೆ.
ಈತ ರೆಸ್ಟೋರೆಂಟ್ ನಲ್ಲಿ ಸೂಪ್ ತಯಾರಿಸಲು ಹಾವಿನ ತಲೆ ಕತ್ತರಿಸಿದ್ದಾನೆ. ಸೂಪ್ ತಯಾರಿಸಲು 20 ನಿಮಿಷ ಹಿಡಿದಿದೆ. ನಂತರ ಅಡಿಗೆ ಕೋಣೆಯನ್ನು ಸ್ವಚ್ಛ ಮಾಡಲು ಶುರು ಮಾಡಿದ್ದು, ಈ ವೇಳೆ ಹಾವಿನ ತಲೆಯನ್ನು ಕಸದ ಬುಟ್ಟಿಗೆ ಹಾಕಲು ಮುಂದಾಗಿದ್ದಾನೆ.
20 ನಿಮಿಷದ ನಂತರ, ಕತ್ತರಿಸಿದ್ದ ತಲೆಯನ್ನು ಎಸೆಯಲು ಕೈನಲ್ಲಿ ಹಿಡಿದಿದ್ದಾನೆ. ಆಗ ಹಾವು ಆತನಿಗೆ ಕಚ್ಚಿದೆ. ಈ ಘಟನೆ ನಡೆದಿದ್ದು ಎಲ್ಲರಿಗೂ ಆಘಾತಕಾರಿಯಾಗಿದೆ.
ಹಾವು ಕಚ್ಚಿದ ತಕ್ಷಣ ಆತ ಕಿರುಚಾಡಿದ್ದು ತಕ್ಷಣ ವೈದ್ಯರನ್ನು ಕರೆಸಲಾಗಿದೆ. ಆದರೆ ವೈದ್ಯರು ಬರುವ ಮೊದಲೇ ಆತ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.