ರಾಷ್ಟ್ರ ಧ್ವಜದ ಮೇಲೆ ಪಕ್ಷದ ಬಾವುಟ ಹೊದಿಸಿ ಅವಮಾನ ಮಾಡಿದ ಬಿಜೆಪಿ!! ಆ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾದರು ಪ್ರಧಾನಿ ಮೋದಿ| ರಾಷ್ಟ್ರ ಧ್ವಜ ಸಂಹಿತೆಯ ಪ್ರಕಾರ ಶಿಕ್ಷೆ ಅನುಭವಿಸುವವರಾರು?
ಪ್ರಧಾನಿ ನರೇಂದ್ರ ಮೋದಿಯ ಸಮ್ಮುಖದಲ್ಲೇ ರಾಷ್ಟ್ರ ಧ್ವಜ ಕ್ಕೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಎದ್ದಿದ್ದು, ನೆಟ್ಟಿಗರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಜೆಪಿ ನಮಗೇನೂ ಅರಿವಿಲ್ಲದಂತೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಹಾಕುತ್ತಿರುವುದು ವಾಸ್ತವದ ಸಂಗತಿಯಾಗಿದೆ.
ಇತ್ತೀಚಿಗೆ ನಿಧಾನರಾದ ಯುಪಿ ಮಾಜಿ ಮುಖ್ಯ ಮಂತ್ರಿ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಪಕ್ಷದ ಬಾವುಟವನ್ನು ಹಾಕಿರುವುದು ಆಕ್ರೋಶಕ್ಕೆ ಕಾರಣವಾದ ವಿಚಾರ.
ಟ್ರೈಬಲ್ ಆರ್ಮಿ ಎಂಬ ಅಧಿಕೃತ ಟ್ವಿಟರ್ ಖಾತೆಯೊಂದು ಈ ವಿಚಾರವನ್ನು ಪ್ರಶ್ನಿಸಿದ್ದು ಬಿಜೆಪಿ ನಾಯಕ ಜೆ.ಪಿ ನಡ್ಡಾ ರಾಷ್ಟ ಧ್ವಜದ ಮೇಲೆ ಪಕ್ಷದ ಬಾವುಟವಿರಿಸಿದ್ದು ತಪ್ಪು, ಈ ಕೂಡಲೇ ಕ್ಷಮೆ ಕೇಳಬೇಕೆಂದು ಟ್ವಿಟ್ ಮಾಡಿದೆ.ಈ ಬಗ್ಗೆ ಯೂತ್ ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್ ಕೂಡಾ ಪ್ರತಿಕ್ರಿಯಿಸಿದ್ದು, ರಾಷ್ಟ್ರ ಮೇಲೆ ಪಕ್ಷದ ಧ್ವಜವಿಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಖ್ಯಾತ ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಅವರು ರಾಷ್ಟ್ರ ದ ಧ್ವಜ ಸಂಹಿತೆಯನ್ನು ತಿಳಿಸಿದ್ದು, ಆ ಪ್ರಕಾರ ಇತರ ಯಾವುದೇ ಧ್ವಜವು ರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿರಬಾರದು, ರಾಷ್ಟ್ರ ಧ್ವಜವನ್ನು ಬೇರೆ ಧ್ವಜದಿಂದ ಮುಚ್ಚಿಹಾಕುವುದು ಅಪರಾಧವಾಗುತ್ತದೆ. ರಾಷ್ಟ್ರ ಆಳುತ್ತಿರುವ ನಾಯಕನ ಎದುರೇ ಈ ಕೃತ್ಯ ಎಸಗಿರುವುದು ಆ ಪಕ್ಷಕ್ಕೆ ನಾಚಿಗೆಯಾಗಬೇಕು ಎಂದು ಆಕ್ರೋಷಿತರಗಿದ್ದಾರೆ.
ಇತ್ತ ಕಡೆ ಕಾನೂನು ತಿಳಿದಿರದ ವ್ಯಕ್ತಿಯೊಬ್ಬ ಆ ಚಿತ್ರವನ್ನು ಟ್ವಿಟ್ ಮಾಡಿದ್ದೂ, ಕಲ್ಯಾಣ್ ಸಿಂಗ್ ಅವರು ದೇಶಕ್ಕಿಂತ ಪಕ್ಷವನ್ನು ಹೆಚ್ಚು ನೆಚ್ಚಿಕೊಂಡಿದ್ದರು, ಅನುಮಾನವಿದ್ದರೆ ಬಾಬರಿ ಮಸೀದಿ ಪ್ರಕರಣವನ್ನೊಮ್ಮೆ ನೋಡಿ ಎಂದು ಹೇಳಿದ್ದರಿಂದ ನೆಟ್ಟಿಗರು ಪ್ರಶ್ನೆಗಳ ಮೇಲೆ ಪ್ರಶ್ನೆಗಳಣ್ಣಿಟ್ಟು ಆ ವ್ಯಕ್ತಿಯನ್ನು ಬಾಯಿ ಮುಚ್ಚಿಸಿದ್ದಾರೆ.
ಒಟ್ಟಾರೆಯಾಗಿ ಬಿಜೆಪಿ ತಮ್ಮ ನಾಯಕನ ಅಂತ್ಯಕ್ರಿಯೆ ಯಲ್ಲಿ ರಾಷ್ಟ್ರ ಧ್ವಜಕ್ಕಿಂತ ತಮ್ಮ ಪಕ್ಷದ ಧ್ವಜವೇ ಮೇಲೆಂದು ಮಾಡಿರುವ ಆ ಘನಂದಾರಿ ಕಾರ್ಯದಿಂದಾಗಿ ಪೇಚಿಗೆ ಸಿಲುಕಿರುವುದಂತು ಸುಳ್ಳಲ್ಲಾ. ಈ ಬಗ್ಗೆ ನಾಯಕರೇ ಪ್ರತಿಕ್ರಿಯಿಸಬೇಕಾಗಿದೆ.