ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಹೊಸ ತಿರುವು | ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಡ್ರಗ್ಸ್ ಸೇವಿಸಿದ್ದರು ಎಂಬುದು ಪರೀಕ್ಷೆ ಮೂಲಕ ದೃಢ !!

ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಮತ್ತು ವಿರೇನ್ ಖನ್ನಾ ಗೆ ಮತ್ತೆ ಸಂಕಷ್ಟ ಎದುರಾಗಿದ್ದು,ಇದೀಗ ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ಇವರು ಡ್ರಗ್ಸ್ ಸೇವಿಸಿದ್ದರು ಎಂಬುದು ಖಚಿತವಾಗಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ರಾಗಿಣಿ ಮತ್ತು ಸಂಜನಾ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಆದರೆ ಅವರಿಗೆ ಈಗ ಮತ್ತೊಂದು ಶಾಕ್ ದೊರಕಿದೆ.

ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ನಟಿಯರ ಕೂದಲು ಸೇರಿದ ವಿವಿಧ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಲಾಗಿತ್ತು.ಇದೀಗ ಸ್ಯಾಂಪಲ್ ಪರೀಕ್ಷೆಯಲ್ಲಿ ಇವರು ಡ್ರಗ್ ಸೇವಿಸಿರುವುದು ದೃಢಪಟ್ಟಿದೆ.

Ad Widget
Ad Widget

Ad Widget

Ad Widget

ಈಗಷ್ಟೇ ಇದರಿಂದ ಹೊರ ಬಂದಿದ್ದ ನಟಿಯರಿಗೆ ಮತ್ತೊಮ್ಮೆ ಬಿಸಿ ಮುಟ್ಟಿದೆ.ಇನ್ನು ರಾಗಿಣಿ ಹಾಗೂ ಸಂಜನಾ ಸ್ನೇಹಿತರಾದ ರಾಹುಲ್ ತೋನ್ಸೆ ರವಿಶಂಕರ್, ಲೂಮ್ ಪೆಪ್ಪರ್ ಕೂಡ ಡ್ರಗ್ಸ್ ಸೇವಿಸಿರುವುದು ವರದಿಯಲ್ಲಿ ದೃಢವಾಗಿದೆ.

2020ರ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆಗೂದಲಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿತ್ತು.

ಇದೀಗ 10 ತಿಂಗಳ ನಂತರ ಹೈದರಾಬಾದ್ ಎಫ್‌ಎಸ್‌ಎಲ್ ಕೇಂದ್ರದಿಂದ ರಿಪೋರ್ಟ್ ಬಂದಿದ್ದು, ಆರೋಪ ಸಾಬೀತಾಗಿರುವುದರಿಂದ ನಟಿಯರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಎಫ್‌ಎಸ್‌ಎಲ್ ವರದಿ ಕೈ ಸೇರಿರುವುದರಿಂದ ಸಿಸಿಬಿ ತನಿಖೆ ಮತ್ತಷ್ಟು ತೀವ್ರಗೊಳ್ಳಲಿದೆ ಎನ್ನಲಾಗಿದೆ.

Leave a Reply

error: Content is protected !!
Scroll to Top
%d bloggers like this: