ಮಂಗಳೂರು ವಿ.ವಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಕೊನೆಯಲ್ಲಿ ಆನ್ ಲೈನ್ ಪರೀಕ್ಷೆ ನಡೆಸಲು ಚಿಂತನೆ|ವಿ.ವಿ ಯ ಹೊಸ ಪ್ರಯತ್ನ ಸಕಾರವಾಗಲಿದೆಯೇ?
ಇದೇ ಮೊದಲ ಬಾರಿಗೆ ಮಂಗಳೂರು ವಿಶ್ವ ವಿದ್ಯಾನಿಲಯವು ಸೆಮಿಸ್ಟರ್ ಪರೀಕ್ಷೆಗಳನ್ನು ಆನ್ಲೈನ್ ನಲ್ಲಿ ನಡೆಸಲು ತೀರ್ಮಾನ ಕೈಗೊಂಡಿದ್ದು, ಆ ಮೂಲಕ ವಿದ್ಯಾರ್ಥಿಗಳಲ್ಲಿ ಮನೆಮಾಡಿದ್ದ ಆತಂಕ, ತವಕ ಕೊಂಚ ದೂರ ಸರಿಸಿದಂತಾಗಿದೆ. ಆರನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆನ್ಲೈನ್ನಲ್ಲಿ ನಡೆಸಲು ಮಂಗಳೂರು ವಿ.ವಿ ಚಿಂತನೆ ನಡೆಸಿದೆ.
ಮಹಾಮಾರಿಯಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮುಖಾಂತರವೇ ತರಗತಿ ನಡೆದಿದ್ದು, ಆ ಬಳಿಕ ಕೆಲವು ಬಾರಿ ಮುಂದೂಡಲಾಗಿದ್ದ ಪರೀಕ್ಷೆಗಳನ್ನು ಶೀಘ್ರವೇ ಆನ್ ಲೈನ್ ಮುಖಾಂತರ ನಡೆಸಿ, ಆ ಬಳಿಕ ಆದಷ್ಟು ಬೇಗ ಫಲಿತಾಂಶವನ್ನು ನೀಡುವ ಬಗೆಗೆ ಯೋಚಿಸಿದೆ.
ಪದವಿ ತರಗತಿಗಳ 1,3, 5ನೇ ಸೆಮಿಸ್ಟರ್ ಪರೀಕ್ಷೆಗಳು ಈಗಾಗಲೇ ಕೊನೆಯ ಹಂತದಲ್ಲಿದ್ದು, ಮೌಲ್ಯ ಮಾಪನ ಕೂಡ ಅಂತಿಮ ಸುತ್ತು ತಲುಪಿದ್ದು, ಆದಷ್ಟು ಬೇಗ ಫಲಿತಾಂಶ ಹೊರಬರಲಿದೆ, ಆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ, ಆನ್ ಲೈನ್ ಪರೀಕ್ಷೆ ನಡೆಸುವ ಪ್ರಯತ್ನ ನಡೆಸಲಿದ್ದೇವೆ
ಎಂದು ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ತಿಳಿಸಿದ್ದಾರೆ.