ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರಿಕ ದೋಣಿಗಳಿಗೆ ಕಲ್ಲೆಸೆದ ಲಂಕೆಯ ನೌಕಾ ಪಡೆ|ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಮೀನುಗಾರರು

Share the Article

ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರಿಕ ದೋಣಿಗಳಿಗೆ ಶನಿವಾರ ತಡರಾತ್ರಿ ಶ್ರೀಲಂಕಾ ನೌಕಾಪಡೆಯ
ಸಿಬ್ಬಂದಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಘಟನೆ ರಾಮೇಶ್ವರದಲ್ಲಿ ನಡೆದಿದೆ.

ಸದ್ಯ 60 ಮೀನುಗಾರಿಕ ದೋಣಿಗಳಿಗೆ ಹಾನಿಯುಂಟಾಗಿದ್ದು,
ಮೀನುಗಾರರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಶನಿವಾರ ರಾತ್ರಿ ಭಾರತೀಯ ಮೀನುಗಾರರ ತಂಡವು
ಕಟ್ಟತೀವು ಬಳಿ ಮೀನು ಹಿಡಿಯುತ್ತಿರುವಾಗ, ಏಕಾಏಕಿ ದಾಳಿ ನಡೆಸಿದ ಲಂಕಾ ನೌಕಾ ಪಡೆಯು ಸುಮಾರು 25
ದೋಣಿಗಳ ಫಿಶಿಂಗ್ ನೆಟ್‌ಗಳನ್ನೂ ಹಾನಿಗೊಳಿಸಿದ್ದು,ಐದು ವೆಸೆಲ್‌ಗಳಲ್ಲಿ ಬಂದು ಕಲ್ಲು ತೂರಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ.ಘಟನೆಯಲ್ಲಿ ಅದೃಷ್ಟವಶಾತ್ ಮೀನುಗಾರರು ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಮೀನುಗಾರಿಕೆ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave A Reply