ಉಡುಪಿಯಲ್ಲಿ ಸದ್ಯಕ್ಕಿಲ ಶಾಲೆ ಓಪನ್ : ಜಿಲ್ಲಾಧಿಕಾರಿ ಹೇಳಿಕೆ

Share the Article

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಸಂಖ್ಯೆ ಹೆಚ್ಚಾಗಿರುವುದರಿಂದ ಸದ್ಯ ಶಾಲೆಗಳನ್ನು ತೆರೆಯುವುದಿಲ್ಲ ಎಂಬುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಸೋಮವಾರದಿಂದ ಶಾಲೆ ಆರಂಭ ಮಾಡುವುದಾಗಿ ಸರಕಾರ ಹೇಳಿದೆ.

ಆದರೆ ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.2 ಕ್ಕಿಂತ ಹೆಚ್ಚಿದ್ದು,ಜಿಲ್ಲೆಯ ಸದ್ಯದ ಪಾಸಿಟಿವಿಟಿ 2.5% ಇದೆ.

ಪಾಸಿಟಿವಿಟಿ ರೇಟ್ ಶೇ.2 ಕ್ಕಿಂತ ಕಡಿಮೆಯಾದ ಬಳಿಕವೇ ಉಡುಪಿಯಲ್ಲಿ ಶಾಲೆ ಆರಂಭಿಸುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.

Leave A Reply