ಮಂಗಳೂರು | ರೈಲಿನಡಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವು

Share the Article

ರೈಲಿನಡಿಗೆ ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಮಂಗಳೂರು ನಗರದ ಮಹಾಕಾಳಿ ಪಡ್ಪು ಬಳಿ ಇಂದು ಬೆಳಗ್ಗೆ ನಡೆದಿದೆ.

ಬೀಡಿ ಕಾರ್ಮಿಕರಾದ ಮಹಿಳೆಯರು ಬೀಡಿ ಕೊಂಡು ವಾಪಸ್ಸು ಹೋಗುತ್ತಿದ್ದಾಗ ರೈಲ್ವೆ ಹಳಿ ದಾಟುವಾಗ ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಜಯಣ್ಣ ಹಾಗೂ ನಾರಾಯಣ ಎಂಬವರ ಪತ್ನಿಯರು ಎಂದು ತಿಳಿದುಬಂದಿದೆ. ಇಬ್ಬರು ಜೊತೆಯಾಗಿ ಹಳಿ ದಾಟುತ್ತಿದ್ದರು ಎಂದು ಹೇಳಲಾಗುತ್ತಿದೆ.

ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಾಗಾಯೇ ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

Leave A Reply