ಹೋಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರ ಧಿಡೀರ್ ದಾಳಿ, 16 ಮಂದಿ ಅಂದರ್

ಹೋಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ಮಾಡಿ ಒಟ್ಟು 16 ಜನರನ್ನು ವಶಕ್ಕೆ ಪಡೆದುಕೊಂಡ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿಯ ಗರ್ದನಾಬಾಗಿ ಇಲಾಖೆಯ ಹೋಟೆಲ್ ಮೇಲೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಇದೊಂದು ಹೈ ಪ್ರೊಫೈಲ್ ದಂಧೆಯಾಗಿದ್ದು, ಈ ವ್ಯವಹಾರದಲ್ಲಿ ಭಾಗಿಯಾದವರ ಹೆಸರು ಬೆಳಕಿಗೆ ಬರಬೇಕಿದೆ.

ಹೋಟೆಲ್ ನಲ್ಲಿ ಸಿಕ್ಕಿರುವ ಮಹಿಳೆಯರು ಕೋಲ್ಕತ್ತಾ ಮತ್ತು ಬನಾರಸ ಮೂಲದವರು ಎಂದು ತಿಳಿದು ಬಂದಿದೆ. ಎಸ್.ಪಿ. ಅಂಬರೀಶ್ ರಾಹುಲ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಸ್ಥಳೀಯ ಪೊಲೀಸರಿಗೆ ದಾಳಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ದಾಳಿ ವೇಳೆ ಪೊಲೀಸರು ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Ad Widget
Ad Widget

Ad Widget

Ad Widget

ಲಾಕ್‍ಡೌನ್ ವೇಳೆಯಲ್ಲಿಯೂ ಇಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು. ಇನ್ನು ಇಲ್ಲಿ ಬರುತ್ತಿದ್ದ ಮಹಿಳೆಯರು ವಿವಾಹಿತರಾಗಿದ್ದು, ಈ ವಿಷಯ ಅವರ ಕುಟುಂಬಸ್ಥರಿಗೂ ತಿಳಿದಿದೆ. ಎಲ್ಲ ವ್ಯವಹಾರಗಳು ವಾಟ್ಸಪ್ ಮೂಲಕವೇ ನಡೆಯುತ್ತಿತ್ತು. ಗ್ರಾಹಕರಿಗೆ ವಾಟ್ಸಪ್ ನಲ್ಲಿಯೇ ಫೋಟೋ ತೋರಿಸಿ ಬೆಲೆ ನಿಗದಿ ಮಾಡಿ ಹೋಟೆಲ್ ಗೆ ಕರೆ ತರಲಾಗುತ್ತಿತ್ತು. ಆರು ಸಾವಿರದಿಂದ 18 ಸಾವಿರ ರೂ.ವರೆಗೆ ಬೆಲೆ ಫಿಕ್ಸ್ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಹೋಟೆಲ್ ಮಾಲೀಕ ಪಂಕಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಹೋಟೆಲ್ ನಡೆಸುವುದಾಗಿ ಹೇಳಿ ಪಂಕಜ್ ಕಟ್ಟಡವನ್ನು ಲೀಸ್ ಪಡೆದುಕೊಂಡು ಸೆಕ್ಸ್ ದಂಧೆ ನಡೆಸುತ್ತಿದ್ದನು ಎಂದು ಬಹಿರಂಗೊಂಡಿದೆ.

ಈ ದಂಧೆಗೆ ಬರುತ್ತಿದ್ದ ಮಹಿಳೆಯರಿಗೆ ಓರ್ವ ಗ್ರಾಹಕನಿಂದ ಬಂದ ಹಣದಿಂದ ಶೇ.30ರಷ್ಟು ನೀಡಲಾಗುತ್ತಿತ್ತು. ಬರೋ ಗ್ರಾಹಕರಿಗೆ ಹೋಟೆಲ್ ನಲ್ಲಿಯೇ ಮದ್ಯ, ಕಾಂಡೋಮ್, ಮಾತ್ರೆಗಳ ಸರಬರಾಜು ಕೂಡ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: