ಚುನಾವಣಾ ಸಮಯದಲ್ಲಿ ಕೋವಿ ಡೆಪಾಸಿಟ್ ಕಾನೂನು ರದ್ದತಿಗೆ ಸಚಿವ ಅಂಗಾರ ನೇತೃತ್ವದಲ್ಲಿ ಗೃಹ ಸಚಿವರಿಗೆ ಮನವಿ
ಸವಣೂರು : ಚುನಾವಣೆ ಸಂದರ್ಭದಲ್ಲಿ ಕೋವಿ ಡೆಪೋಸಿಟ್ ಮಾಡುವಂತಹ ಕಾನೂನನ್ನು ರದ್ದುಪಡಿಸಬೇಕು, ಮತ್ತು ಕೋವಿ ಪರವಾನಿಗೆ ನೀಡುವ ಗೊಂದಲವನ್ನು ಪರಿಹರಿಸಬೇಕು ತಂದೆಯ ಹೆಸರಿನಿಂದ ಮಗನಿಗೆ ಕೋವಿ ಪರವಾನಿಗೆ ಬದಲಾವಣೆ ಮಾಡುವ ಸಂದರ್ಭದಲ್ಲಿ ತಾಲೂಕಿನಲ್ಲಿಯೇ ಪರವಾನಿಗೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಜೊತೆಗೆ ಬಂದೂಕು ತರಬೇತಿ ಪರವಾನಿಗೆ ಮತ್ತು ಅರಣ್ಯ ಬಫರ್ ಜೋನ್ 10 ಕಿಮೀ ವ್ಯಾಪ್ತಿ ಕಾನೂನಿಗೆ ವಿನಾಯಿತಿ ನೀಡಬೇಕೆಂದು ಸಚಿವ ಅಂಗಾರ ನೇತೃತ್ವದಲ್ಲಿ ಗೃಹ ಸಚಿವರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಶ್ರೀ ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿಮೇನಾಲ ರಾಕೇಶ್ ರೈ ಕೆಡೆಂಜಿ ಪ್ರಮುಖರಾದ ಎ ವಿ ತೀರ್ಥರಾಮ ಕೃಷ್ಣ ಶೆಟ್ಟಿ ಕಡಬ, ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕಂದಡ್ಕ, ಸುಬ್ರಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಸದಸ್ಯ ಪ್ರಸನ್ನ ದರ್ಬೆ ಉಪಸ್ಥಿತರಿದ್ದರು.