ಮೈಕಲ್ ಜಾಕ್ಸನ್ ನ ಭೂತದೊಂದಿಗೆ ಮದುವೆಯಾಗಿದ್ದಾಳಂತೆ ಈ ಮಹಿಳೆ | ಈಕೆಯ ಕಥೆ ಕೇಳಿದರೆ ನೀವು ನಗುವುದಂತು ಖಂಡಿತ !

Share the Article

ದೆವ್ವ-ಭೂತಗಳ ಇರುವಿಕೆಯನ್ನು ಅನೇಕರು ನಂಬುತ್ತಾರೆ. ಕ್ಯಾಮರಾ ಕಣ್ಣಿಗೆ ದೆವ್ವ ಸೆರೆಯಾಗಿದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೆವ್ವ ನೋಡಿದ್ದೇವೆ ಎನ್ನುತ್ತಾರೆ. ಇವೆಲ್ಲವೂ ನಿಜವಿರಬಹುದು ಅಥವಾ ಅವರ ಮಾನಸಿಕ ಕಲ್ಪನೆಯೂ ಆಗಿರಬಹುದು.

ಇವನ್ನೆಲ್ಲಾ ನಂಬುವುದು ಅಥವಾ ಬಿಡುವುದೆಲ್ಲಾ ಅವರವರ ಇಚ್ಚೆಗೆ ಬಿಟ್ಟಿದ್ದು. ಆದರೆ ಈ ಎಲ್ಲದರ ಮಧ್ಯೆ ಅಮೆರಿಕಾದ ಕ್ಯಾಥೀನ್ ರಾಬರ್ಟ್ಸ್ ಹೆಸರಿನ ಮಹಿಳೆ ಈ ಕುರಿತಂತೆ ವಿಚಿತ್ರ ಹೇಳಿಕೆ ನೀಡಿದ್ದಾಳೆ.

ದಿವಂಗತ ಡಾನ್ಸರ್, ಮೈಕಲ್ ಜಾಕ್ಸನ್ ಭೂತದ ಜೊತೆ ಕ್ಯಾಥೀನ್ ಮದುವೆಯಾಗಿದೆಯಂತೆ. ಇಷ್ಟೇ ಅಲ್ಲ, ಮೈಕಲ್ ಜಾಕ್ಸನ್ ತನ್ನ ಮೈಮೇಲೆ ಬರ್ತಾರೆಂದು ಆಕೆ ಹೇಳಿಕೊಂಡಿದ್ದಾಳೆ.

ಬಾತ್ ರೂಮಿಗೆ ಹೋದಾಗೆಲ್ಲ ಮೈಕಲ್ ಜಾಕ್ಸನ್ ಭೂತ ಆಕೆಯ ಮೈಮೇಲೆ ಬರುತ್ತದೆಯಂತೆ. ಡಾನ್ಸ್ ಮಾಡುವುದು, ಹಾಡು ಹೇಳುವ ಭೂತ, ತನಗಿಷ್ಟವಾದ ಆಹಾರ ಸೇವನೆ ಮಾಡುತ್ತದೆಯಂತೆ.

ಅದಲ್ಲದೆ ಲೈಂಗಿಕ ಸಂಬಂಧದ ಬಗ್ಗೆ ಮಾತನಾಡಿದ ಕ್ಯಾಥೀನ್, ಮೈಕಲ್ ಭೂತವನ್ನು ಈವರೆಗೂ ಸ್ಪರ್ಶಿಸಿಲ್ಲ, ಹಾಗೆಯೇ ಚುಂಬಿಸಿಲ್ಲವೆಂದಿದ್ದಾಳೆ. ಕ್ಯಾಥೀನ್ ಇದಕ್ಕೂ ಮೊದಲು, ತಾನು ಹಿರಿಯ ನಟಿ ಮರ್ಲಿನ್ ಮನ್ಸೂ ಅವತಾರ ಎಂದು ಕೂಡ ಹೇಳಿಕೊಂಡಿದ್ದಳು.

ಕ್ಯಾಥೀನ್ ಟಿಕ್ಟಾಕ್ ವಿಡಿಯೋದಲ್ಲಿ ಸಕ್ರಿಯವಾಗಿದ್ದಾಳೆ. ವಿಡಿಯೋ ಮೂಲಕವೇ ಈ ವಿಷಯವನ್ನು ಆಕೆ ಹೇಳಿಕೊಂಡಿದ್ದಾಳೆ. ಕೆಲವರು ಇದನ್ನು ನಂಬಿದ್ದಾರೆ. ಹಾಗೆಯೇ ಕೆಲವರು ಇದು ಆಕೆಯ ಮಾನಸಿಕ ಕಲ್ಪನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮುಂದೆ ಹೋಗಿ ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಎಂದು ಗೇಲಿ ಮಾಡಿದ್ದಾರೆ.

Leave A Reply