ಮೆಸ್ಕಾಂ ನಿಂದ ಬರೋಬ್ಬರಿ 200 ಹೊಸ ನೇಮಕಾತಿ | ಪದವೀಧರರಿಗೆ ಉದ್ಯೋಗ ಪಡೆಯಲು ಉತ್ತಮ ಅವಕಾಶ
ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯಲ್ಲಿ ಖಾಲಿ ಇರುವ 200 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ.
ಪದವಿ ಹಾಗೂ ಡಿಪ್ಲೋಮಾ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
ಸಂಸ್ಥೆ ಹೆಸರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆ(ಮೆಸ್ಕಾಂ)
ಹುದ್ದೆ ಹೆಸರು: ಅಪ್ರೆಂಟಿಸ್
ಒಟ್ಟು ಖಾಲಿ ಇರುವ ಹುದ್ದೆಗಳು: 200
ತರಬೇತಿ ಅವಧಿ: ಒಂದು ವರ್ಷ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 09, 2021
ವಿದ್ಯಾರ್ಹತೆ:
ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯಗಳಲ್ಲಿ ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ/ಪದವಿ ಪಡೆದಿರಬೇಕು.
ಹುದ್ದೆಗಳ ಹೆಸರು:
ಪದವಿ ಅಪ್ರೆಂಟಿಸ್:
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 125
ಸ್ಟೈಪೆಂಡ್: 7,000 ರೂ.
ಡಿಪ್ಲೋಮಾ ಅಪ್ರೆಂಟಿಸ್:
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 75
ಸ್ಟೈಪೆಂಡ್: 5,000 ರೂ.
ವಯೋಮಿತಿ:
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ
• ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ಅರ್ಭ್ಯರ್ಥಿಗಳಿಗೆ 18 ರಿಂದ 38 ವರ್ಷ ವಯೋಮಿತಿ
• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ವಯೋಮಿತಿ
ಈಗಾಗಲೇ ಅಪ್ರೆಂಟಿಸ್ (ತಿದ್ದುಪಡಿ) ಕಾಯ್ದೆ 1973ರ ಅನ್ವಯ ಅಪ್ರೆಂಟಿಸ್ ಅವಧಿಯಲ್ಲಿರುವವರು ಹಾಗೂ ಒಂದು ಅಥವಾ ಅಧಿಕ ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಮೆಸ್ಕಾಂ ನೇಮಕಾತಿ 2021 ಅರ್ಜಿ ಸಲ್ಲಿಕೆ ವಿಧಾನ:
National Web Portal ನಲ್ಲಿ ನೋಂದಣಿ ಮಾಡಿಕೊಂಡಿದ್ದರೆ, ನೇರವಾಗಿ Mangalore Electricity Supply Company ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಮೇಲ್ ಹಾಗೂ ಮೊಬೈಲ್ ಫೋನ್ ಸಂಖ್ಯೆ ನೀಡಬೇಕು. ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಅಗತ್ಯಬಂದಾಗ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ತುಂಬಿ, ದಾಖಲೆಗಳನ್ನು ಸಲ್ಲಿಸಬೇಕು.
ನ್ಯಾಷನಲ್ ವೆಬ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳದ ವಿದ್ಯಾರ್ಥಿಗಳಿಗೆ ನೋಂದಣಿ ವಿಧಾನ ಹೀಗಿದೆ:
• ಮೊದಲಿಗೆ www.mhrdnats.gov.inಗೆ ಭೇಟಿ ನೀಡಿ
• Enroll ಆಯ್ಕೆಗೆ ಕ್ಲಿಕ್ ಮಾಡಿ
• ಅರ್ಜಿಯನ್ನು ಸಂಪೂರ್ಣವಾಗಿ ತುಂಬಿ
• ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ವಿಶಿಷ್ಟ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ
• ನೋಂದಣಿ ಸಂಖ್ಯೆ ಸಿಕ್ಕಬಳಿಕ ಮುಂದಿನ ಹಂತದ ನೋಂದಣಿ ಮುಂದುವರೆಸಬಹುದು
• ಲಾಗಿನ್ ಆದ ಬಳಿಕ ಸರಿಯಾದ ವಿಭಾಗವನ್ನು ಗುರುತಿಸಿ ನಿಮ್ಮ ರೆಸ್ಯೂಮ್ ಅಪ್ಲೋಡ್ ಮಾಡಿ
• ಇಲ್ಲಿ Mangalore Electricity Supply Company ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 19/08/2021
ಆನ್‌ಲೈನ್‌ನಲ್ಲಿ NATS ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05/09/2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09/09/2021
ಶಾರ್ಟ್ ಲಿಸ್ಟ್ ಆದವರ ಪಟ್ಟಿ ಪ್ರಕಟ: 14/09/2021