ಮಂಗಳೂರು ವಿ.ವಿಯಲ್ಲಿ ಇದ್ದಾರೆ 53 ಅಫ್ಘಾನಿಸ್ತಾನದ ವಿದ್ಯಾರ್ಥಿಗಳು | ಆತಂಕದಲ್ಲಿ ವಿದ್ಯಾರ್ಥಿಗಳು

ಅಫ್ಘಾನಿಸ್ಥಾನವು ತಾಲಿಬಾನ್‌ ಉಗ್ರರ ಕೈವಶ ವಾಗುತ್ತಿದ್ದಂತೆ ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಅಫ್ಘಾನಿ ಸ್ಥಾನದ ಸುಮಾರು 53 ವಿದ್ಯಾರ್ಥಿಗಳು ಮುಂದೇನು ಎಂದು ಭವಿಷ್ಯದ ಚಿಂತೆಯಲ್ಲಿದ್ದಾರೆ.

 

ವಿ.ವಿ.ಯಲ್ಲಿ ಪದವಿಯಲ್ಲಿ 18, ಸ್ನಾತಕೋತ್ತರ ಪದವಿಯಲ್ಲಿ 13, ಪಿಎಚ್‌ಡಿಯಲ್ಲಿ 22 ವಿದ್ಯಾರ್ಥಿಗಳು ಶಿಕ್ಷಣ ಪಡೆಯು ತ್ತಿದ್ದು, ಹಾಸ್ಟೆಲ್‌ಗ‌ಳಲ್ಲಿದ್ದಾರೆ.

ಇವರು 2-3 ವರ್ಷದ ಹಿಂದೆ ಮಂಗಳೂರಿಗೆ ಶಿಕ್ಷಣಕ್ಕಾಗಿ ಬಂದಿದ್ದರು. ತಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮಾಧ್ಯಮಗಳ ಮೂಲಕ / ಮೊಬೈಲ್‌ ಕರೆ ಮಾಡಿ ವಿಚಾರಿಸುತ್ತಿ ರುವ ದೃಶ್ಯ ಕಂಡು ಬರುತ್ತಿದೆ. ಕೆಲವು ವಿದ್ಯಾರ್ಥಿಗಳು ದೇಶದ ಪರಿಸ್ಥಿತಿ ಹಾಗೂ ಮನೆ ಮಂದಿಯ ಸಮಸ್ಯೆ- ಸವಾಲುಗಳನ್ನು ಕೇಳಿ ಕಣ್ಣೀರಿಡುತ್ತಿ ದ್ದಾರೆ. ಪ್ರಾಧ್ಯಾಪಕರು, ಸಹಪಾಠಿಗಳ ಜತೆಗೆ ನೋವು ತೋಡಿಕೊಳ್ಳುತ್ತಿದ್ದಾರೆ.

Leave A Reply

Your email address will not be published.