ಕಡಬ | ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಮಳೆ ಬಂತೆಂದು ಕೊಡೆ ಬಿಡಿಸಿದಾಗ ರಸ್ತೆಗೆಸೆಯಲ್ಪಟ್ಟು ಮಹಿಳೆ ಸಾವು

Share the Article

ಮಹಿಳೆಯೊಬ್ಬರು ಬೈಕ್ ನಲ್ಲಿ ತನ್ನ ಮಗನ ಜೊತೆ ಪ್ರಯಾಣಿಸುತ್ತಿದ್ದ ವೇಳೆ, ಮಳೆ ಬಂತೆಂದು‌ ಕೊಡೆ ಬಿಡಿಸಲು ಹೋಗಿ ರಸ್ತೆಗೆ ಎಸೆಯಲ್ಪಟ್ಟು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಕಡಬದಲ್ಲಿ ನಡೆದಿದೆ.

ಎಡಮಂಗಲದ ದೇವಸ್ಯದ ಶಶಿಧರ ಎಂಬವರ ಪತ್ನಿ ವಿನೋದ ಶಶಿಧರ್ (47) ಮೃತಪಟ್ಟ ಮಹಿಳೆ ಎಂದು ತಿಳಿದುಬಂದಿದೆ.

ತನ್ನ ಪುತ್ರ ನಿಖಿಲ್ ಜೊತೆ ಸುಳ್ಯದ ತಾಯಿ ಮನೆಗೆ ಹೋಗುವ ಸಂದರ್ಭದಲ್ಲಿ, ಐವರ್ನಾಡು ಹೈಸ್ಕೂಲು ಸಮೀಪ ಮಳೆ ಬಂದುದರಿಂದ ಕೊಡೆ ಬಿಡಿಸಲೆತ್ನಿಸಿದಾಗ ವಿನೋದರವರು ರಸ್ತೆಗೆಸೆಯಲ್ಪಟ್ಟಿದ್ದಾರೆ.

ಕೂಡಲೇ ಅವರನ್ನು ಸ್ಥಳೀಯರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆಗೆ ತೀವ್ರವಾಗಿ ಪೆಟ್ಟು ತಗುಲಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ನಿಧನರಾಗಿದ್ದಾರೆ.

Leave A Reply