ತನ್ನ ಹುಟ್ಟು ಹಬ್ಬಕ್ಕೆ ಬಡ ಕುಟುಂಬಕ್ಕೆ 350ಕ್ಕೂ ಅಧಿಕ ಅಡಿಕೆ ಸಸಿ ನೆಟ್ಟು ತೋಟ ಮಾಡಿ ಕೊಟ್ಟ ರಾಜೇಶ್ ವಾಲ್ತಾಜೆ
ಕಡಬ :ತನ್ನ ಹುಟ್ಟು ಹಬ್ಬಕ್ಕೆ ಬಡಕುಟುಂಬವೊಂದಕ್ಕೆ ಸುಮಾರು 350ಕ್ಕೂ ಹೆಚ್ಚು ಅಡಿಕೆ ಸಸಿ ನೆಟ್ಟು ತೋಟ ಮಾಡಿಕೊಡುವ ಮೂಲಕ ಕಾಣಿಯೂರು ಚಾರ್ವಾಕದ ಶ್ರೀ ದುರ್ಗಾ ಅರ್ಥ್ ಮೂವರ್ಸ್ ಮಾಲಕರಾದ ರಾಜೇಶ್ ವಾಲ್ತಾಜೆ ಅವರು ಶ್ಲಾಘನೀಯ ,ಮಾದರಿ ಕಾರ್ಯ ಮಾಡಿದ್ದಾರೆ.
ರಾಜೇಶ್ ಅವರು ಪ್ರತಿವರ್ಷ ತನ್ನ ಹುಟ್ಟು ಹಬ್ಬದಂದು ಅ ಪರಿಸರಸ್ನೇಹಿಯಾಗಿ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ, ಅದರಂತೆ ಈ ಬಾರಿಯೂ ಕೂಡ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಅಬೀರ ಪರಿಸರದಲ್ಲಿ ತೀರಾ ಬಡಕುಟುಂಬದ ಜಮೀನಿನಲ್ಲಿ 350 ಕ್ಕಿಂತಲೂ ಹೆಚ್ಚಿನ ಅಡಿಕೆ ಗಿಡ ನೆಡಿಸಿ ಆ ಕುಟುಂಬಕ್ಕೆ ಜೇವನಪೂರ್ತಿ ಮರೆಯಲಾಗದ ನೆನಪಾಗಿ ಉಳಿದಿದ್ದಾರೆ.
ಇಂದು ಸಣ್ಣ ಕೆಲಸಗಳನ್ನು ದೊಡ್ಡದಾಗಿ ಪತ್ರಿಕೆಗಳಲ್ಲಿ ಬಿಂಬಿಸುವ ಜನರ ಮದ್ಯೆ ಇಂತಹ ಸಮಾಜಮುಖಿ ಕಾರ್ಯ ಮಾಡುವ ಮಾದರಿ ಯುವಕನ ನಡೆಯನ್ನು ಸಮಾಜಕ್ಕೆ ತೆರೆದಿಡುವ ಪ್ರಯತ್ನ ನಮ್ಮದಾಗಿದೆ. ಹತ್ತಾರು ಜನರನ್ನು ಸೇರಿಸಿ ಸಂಘಟನೆಯಿಂದ ಮಾತ್ರ ಮಾಡಲು ಸಾಧ್ಯ ಎಂದು ನಂಬುವ ಜನಕ್ಕೆ ಯಾವುದೇ ಸಂಘಟನೆಯ ಬೆಂಬಲ ಇಲ್ಲದೆ ಆಪ್ತರೊಂದಿಗೆ ಕೂಡಿ ಸಮಾಜ ಸೇವೆ ಮಾಡಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.
ಅವರ ಈ ಕಾರ್ಯಕ್ಕೆ ದೇವಿಪ್ರಸಾದ್ ಕಲ್ಪಡ ,ಪುನೀತ್ ಕಲ್ಪಡ ,ಅಶಿಕ್ ಕಂಪ,ದಾಮೊದರ ಸವಣೂರು ,ಚೇತನ್,ಪ್ರಸಾದ್ ಕುಕ್ಕುನಡ್ಕ,ದಿನೇಶ್, ಶ್ರೇಯಸ್ ಇಡ್ಯಡ್ಕ ,ಮಹೇಶ್ ಪಾಲ್ತಿಲ, ಶರತ್,ಯೋಗಿತ್,ಕೃಪಾಂಕ ,ವಿಖ್ಯಾತ್ ಅಗಳಿ ಮೊದಲಾದವರು ಕೈ ಜೋಡಿಸಿದರು.