ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಜೊತೆ ಐಸ್ ಕ್ರೀಮ್ ಸವಿದು, ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿ

Share the Article

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಬಂದ ಬಳಿಕ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಪಿ.ವಿ ಸಿಂಧು ಜೊತೆ ಐಸ್‍ಕ್ರೀಂ ಸವಿಯುವ ಮೂಲಕ ಮೋದಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಮೋದಿ ತಮ್ಮ ನಿವಾಸದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಭಾರತೀಯ ಕ್ರೀಡಾಪಟುಗಳಿಗಾಗಿಯೇ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ.

ಮೋದಿ ವಿಶೇಷವಾಗಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೆಚ್ಚಿನ ಖಾದ್ಯ ಚೂರ್ಮಾ ಮಾಡಿಸಿ ಊಟ ಬಡಿಸಿದ್ದಾರೆ. ಭಾರತದ ಕುಸ್ತಿಪಟುಗಳ ಮತ್ತು ಹಾಕಿ ತಂಡದ ಎಲ್ಲ ಆಟಗಾರರೊಂದಿಗೂ ಕೂಡ ಮೋದಿ ಕುಶಲೋಪರಿ ವಿಚಾರಿಸಿ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದ್ದಾರೆ.

ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ ಮೋದಿ ಮಾತುಕತೆ ನಡೆಸಿ ಫೋಟೋಗೆ ಪೋಸ್ ನೀಡಿದ್ದಾರೆ.

Leave A Reply