ಮಂಗಳೂರು: ಮಕ್ಕಿ ಮನೆ ಕಲಾವೃಂದ ಮಂಗಳೂರು ವತಿಯಿಂದ ಆನ್ ಲೈನ್ ಮೂಲಕ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ದಿನಾಚರಣೆ
ಮಕ್ಕಿ ಮನೆ ಕಲಾವೃಂದ ಮಂಗಳೂರು ವತಿಯಿಂದ ಆನ್ ಲೈನ್ ಮೂಲಕ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ದಿನಾಚರಣೆ ನಡೆಯಿತು.
ಮಾಜಿ ಸೈನಿಕರಾದ ಜನಾರ್ದನ ನಾಯ್ಕ ಉಪ್ಪಿನಂಗಡಿ ಹಾಗೂ ಪ್ರಾಂಶುಪಾಲರಾದ ರೊ. ವಿನ್ಸೆಂಟ್ ಡಿಕೋಸ್ತ ಸಾಣೂರು ಹಾಗೂ ಶರ್ಮಿಳಾ ಮುಕೇಶ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಕ್ಷಿತ್ ಕೆ ಪೂಜಾರಿ ಮುಂಬೈ,ಚಿತ್ರಾಲಿ ತೇಜ್ ಪಾಲ್ ಮಂಗಳೂರು, ಆದ್ಯ ಕಾನುಬೈಲು ಡಿ ಬೆಂಗಳೂರು, ಅನುಷ್ಕಾ ಆರ್.ಟಿ ಧಾರವಾಡ, ಮೌಲ್ಯ ವೈ.ಆರ್ ಜೈನ್ ಮೂಡುಬಿದಿರೆ, ಶ್ರೇಯಾ ಎಂ.ಜಿ ಸುಳ್ಯ, ಪ್ರಾಪ್ತಿ ಜೈನ್ ಪುಣೆ, ಮನಸ್ವಿ ಕುಲಾಲ್ ನಿಟ್ಟೆ, ದಿಶಾನ್ ಸಿ ಜೈನ್ ಬೇಲೂರು, ಧಾತ್ರಿ ಮಂಗಳೂರು, ನಿರಂಜನ್ ಕುದ್ಯಾಡಿ, ಅನನ್ಯ ಹುಬ್ಬಳ್ಳಿ, ಅಪೂರ್ವ ಹುಬ್ಬಳ್ಳಿ, ಮನುಸ್ವಿ ಮಂಗಳೂರು, ತನುಸ್ವಿ ಮಂಗಳೂರು,ಯಶ ಎಲ್ ಆಚಾರ್ಯ ಮಂಗಳೂರು,ಸುಶಾ ಎಲ್ ಆಚಾರ್ಯ ಮಂಗಳೂರು, ಅಭಿಷ್ಟ ಹೊರನಾಡು, ಮಹಾನ್ ಎಂ ಹೊರನಾಡು, ನಿತ್ಯ ಡಿ ಹೊರನಾಡು, ನೇಹಾ ಡಿ.ಹೊರನಾಡು , ಚಿಂತನ ಡಿ.ಹೊರನಾಡು, ಚಿರಂತನ್ ಹೊರನಾಡು ಭಾಗವಹಿಸಿದ್ದರು.
ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು.
ಶ್ರೇಯಾ ದಾಸ್ ಮಂಗಳೂರು ನಿರೂಪಿಸಿದರು,
ಸ್ಪೂರ್ತಿ ಜೈನ್ ಕುಣಿಗಲ್, ನಿರಂಜನ್ ಜೈನ್ ಕುದ್ಯಾಡಿ ಸಹಕರಿಸಿದರು.