ಬೆಳ್ತಂಗಡಿ | 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಗೋ ದಾನ ಕಾರ್ಯಕ್ರಮ

Share the Article

75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ಪಶು ಸಂಗೋಪನೆಯ ಅಮೃತ ಸಿರಿ ಯೋಜನೆಯ ಮೂಲಕ 75 ಫಲಾನುಭವಿಗಳಿಗೆ 75 ಗೋವುಗಳನ್ನು ವಿತರಿಸುವ ಸನ್ಮಾನ್ಯ ಶಾಸಕರಾದ ಹರೀಶ್ ಪೂಂಜರವರ ಸೂಚನೆಯಂತೆ, ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಗೋ ದಾನ ಕಾರ್ಯಕ್ರಮ ನಡೆಯಿತು.

ಸಹಕಾರಿ ಸಂಘದ ನಿರ್ದೇಶಕರಾದ ಕಿರಣ್ ಕುಮಾರ್ ಮಂಜಿಲ ಇವರು ಗೋವಿನ ಕರುವನ್ನು ಸಂಘಕ್ಕೆ ದಾನವಾಗಿ ನೀಡಿದ್ದು, ಇದನ್ನು ಸಂಘದ ಮೂಲಕ ಸುಂದರ ನಿಡ್ಯಾಲ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ ಉಮನಬೆಟ್ಟು, ನಿರ್ದೇಶಕರಾದ ಸುಮಿತ್ರಾ ಶೆಟ್ಟಿ ಕಾರ್ಯದರ್ಶಿಯಾದ ಪ್ರದೀಪ್ ಪಾಣಿಮೇರು, ಸಿಬ್ಬಂದಿ ವರ್ಗ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave A Reply