ಬಹುನಿರೀಕ್ಷೆಯ ದೇಶಭಕ್ತಿಗೀತೆ ಜಯತು ಜನ್ಮಭೂಮಿ ತೆರೆಗೆ | 75 ನೇ ಸ್ವಾತಂತ್ರ್ಯವನ್ನು ವಿಶೇಷವಾಗಿಸಿದೆ ಯುವಶಕ್ತಿ ಕಡೇಶಿವಾಲಯ
ಸದಾ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಯುವಶಕ್ತಿ(ರಿ)ಕಡೇಶಿವಾಲಯ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ದೇಶಭಕ್ತಿ ಗೀತೆ, ಜಯತು ಜನ್ಮಭೂಮಿ 75 ನೇ ಸ್ವಾತಂತ್ರ್ಯ ದಿನವಾದ ಇಂದು ಯುವಶಕ್ತಿ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿತು.
ಶೆಟ್ಟಿ ಅಜಯ್ ರಚನೆಯ ಸಾಹಿತ್ಯಕ್ಕೆ ಹೆಮ್ಮೆಯ ಗಾಯಕ ಸಂತೋಷ್ ಬೇಂಕ್ಯ ಧ್ವನಿಯಾಗಿದ್ದು, ಅಶ್ವಿನ್ ಪುತ್ತೂರು ಸಂಗೀತ ನಿರ್ದೇಶಸಿದ್ದಾರೆ. ಸದ್ಯ ಈ ದೇಶ ಭಕ್ತಿ ಗೀತೆ ಈಗಾಗಲೇ ಹತ್ತೂರಿನಲ್ಲೂ ಭಾರೀ ಸದ್ದು ಮಾಡುತ್ತಿದೆ.
ಕಡೇಶಿವಾಲಯದ ಪುರದೊಡೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಕಡೇಶಿವಾಲಯ ಪಂಚಾಯತ್ ಪಿಡಿಓ ಸುನಿಲ್ ಕುಮಾರ್ ಹಾಡಿಗೆ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಭಾಸ್ಕರ ನಾಯ್ಕ್ ಪುಣಚ, ಪಂಚಾಯತ್ ಅಧ್ಯಕ್ಷರಾದ ಸುರೇಶ್ ಬನಾರಿ, ಅರ್ಚಕರಾದ ದಿನೇಶ್ ಭಟ್, ಸಹಿತ ಯುವಶಕ್ತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿಡುಗಡೆಗೊಂಡ ದೇಶಭಕ್ತಿ ಗೀತೆಯನ್ನು ಆಲಿಸಲು ಈ ಕೆಳಗಿನ ಲಿಂಕ್ ಒತ್ತಿ.
https://youtu.be/5EgJtJFwm4g