ಸುಳ್ಯ | ಅಕ್ರಮವಾಗಿ ಮರ ಕಡಿಯಲು ಯತ್ನ, ಮೂವರ ಬಂಧನ

Share the Article

ಪೋಲೀಸರ ಕಣ್ತಪ್ಪಿಸಿ ಅರಣ್ಯದಲ್ಲಿ ಮರ ಕಡಿಯಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಿದ ಘಟನೆ ಸುಳ್ಯದ ದಬ್ಬಡ್ಕದಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಹೆಚ್ ಹೇಮಾಧರ, ಪ್ರದೀಪ್.ಕೆ.ವಿ, ಹರಿಕೃಷ್ಣ.ಡಿ.ಆರ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಸಂಪಾಜೆ ಪ್ರಾದೇಶಿಕ ವಲಯ ವ್ಯಾಪ್ತಿಯ ದಬ್ಬಡ್ಕ ಶಾಖಾ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಎರಡು ದೊಡ್ಡ ಗಾತ್ರದ ಬೂರುಗು ಹಾಗೂ ಹುಲುವೆ ಮರಗಳನ್ನು ಕಡಿಯಲು ಪ್ರಯತ್ನಿಸಿದ್ದರು.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂಪಾಜೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Leave A Reply