ಸವಣೂರು ಹಿಂ.ಜಾ.ವೇ.ಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ
ಸವಣೂರು: ಭಾರತ ದೇಶದಲ್ಲಿ ನೂರಾರು ಹೋರಾಟದ ಪರಿಣಾಮವಾಗಿ ಈಗ ನೆಮ್ಮದಿ ಶಾಂತಿಯಿಂದ ಬದುಕುತ್ತಿದ್ದೇವೆ. ಧರ್ಮ, ಸಂಸ್ಕೃತಿ ಉಳಿದರೆ ಮಾತ್ರ ಈ ದೇಶ ಸಂಪತ್ಪರಿತವಾಗಿ ಮೆರೆಯಲು ಸಾಧ್ಯ ಎಂದು ಹೇಳಿದರು. ಸಿಕ್ಕ ಸ್ವಾತಂತ್ರ್ಯವನ್ನು ಉಳಿಸುವ ಬಹು ದೊಡ್ಡ ಜವಬ್ದಾರಿ ನಮ್ಮ ಮೇಲಿದೆ, ಅದನ್ನು ಅರಿತುಕೊಂಡು ನಾವು ಬದುಕಬೇಕಾಗಿದೆ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಹೇಳಿದರು.
ಅವರು ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ಆ.13ರಂದು ರಾತ್ರಿ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಮಾತನಾಡಿದರು.
ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ ಮಾತನಾಡಿ,ಅಖಂಡ ಭಾರತದ ಪುನರ್ ನಿರ್ಮಾಣಕ್ಕಾಗಿ ಹಿಂದೂ ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಲಾಗುತ್ತಿದೆ.ತ್ರಿಖಂಡವಾಗಿರುವ ಭಾರತ ಅಖಂಡವಾಗುವ ಪಣವನ್ನು ನಾವೆಲ್ಲರೂ ತೊಡಬೇಕು ಎಂದರು.
ಸವಣೂರು ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಮಾತನಾಡಿ,ಯುವಜನತೆ ಸುಭದ್ರ ರಾಷ್ಟ್ರ ಕಟ್ಟಲು ಪಣತೊಡಬೇಕು. ಹಳೇ ಚಿಂತನೆಯ ಮೂಲಕ ಹೊಸ ಕಲ್ಪನೆಯನ್ನು ಜಗತ್ತಿಗೆ ನೀಡುವ ಪ್ರಯತ್ನ ಮಾಡಬೇಕಿದೆ.ಅದೆಷ್ಟೋ ದೇಶಗಳಿಂದ ಬಂದವರಿಗೆ ಆಶ್ರಯ ನೀಡಿದ ಹಿರಿಮೆ ಭಾರತಕ್ಕಿದೆ. ಸ್ವಾಮಿ ವಿವೇಕಾನಂದರು ಎಲ್ಲ ಹಂತದಲ್ಲಿಯೂ ಪ್ರೇರಣಾದಾಯಿ ಗಳು. ಅವರು ಮಾಡಿದ ಒಂದು ಭಾಷಣವನ್ನು 125 ವರ್ಷಗಳ ನಂತರವೂ ನೆನಪಿಸಿಕೊಂಡು ಆ ದಿನವನ್ನು ಈಗಲೂ ಆಚರಿಸುತ್ತೇವೆ ಅಂದರೆ ಅದಕ್ಕಿಂತ ದೊಡ್ಡ ವಿಶೇಷ ಇನ್ನೊಂದಿಲ್ಲ ಎಂದರು.
ಹಿಂ.ಜಾ.ವೇ.ತಾಲೂಕು ಕಾರ್ಯದರ್ಶಿ ಪುಷ್ಪರಾಜ್ ಸವಣೂರು,ಸವಣೂರು ಘಟಕದ ಕಾರ್ಯದರ್ಶಿ ನಿಶಾಂತ್ ಪರಣೆ ಉಪಸ್ಥಿತರಿದ್ದರು.
ಅಧ್ಯಕ್ಷ ಶ್ರೀಧರ್ ಇಡ್ಯಾಡಿ ಸ್ವಾಗತಿಸಿದರು. ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು. ನ್ಯಾಯವಾದಿ ಮಹೇಶ್ ಕೆ.ಸವಣೂರು ಕಾರ್ಯಕ್ರಮ ನಿರೂಪಿಸಿದರು.