ಮಂಗಳೂರು | ಮನೆಮನೆಗೆ ಹೋಗಿ, ಮಕ್ಕಳ ಫೋಟೋ ಕ್ಲಿಕಿಸಿ, ಮಾಹಿತಿ ದೋಚಿದ ಅಪರಿಚಿತ ಮಹಿಳೆಯರ ಗ್ಯಾಂಗ್

ಇತ್ತೀಚಿನ ದಿನಗಳಲ್ಲಿ ದರೋಡೆ, ಕಳ್ಳತನಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಅಪರಿಚಿತರ ಹಾವಳಿ ಅಧಿಕವಾಗಿದೆ. ಇದೀಗ ಇಂತಹುದೇ ಒಂದು ಘಟನೆ, ಮಂಗಳೂರು ನಗರದ ಕುಳೂರಿನ ರಾಯಕಟ್ಟೆ ಪ್ರದೇಶದಲ್ಲಿ ನಡೆದಿದೆ.

ಮಾರ್ಕೆಂಟಿಂಗ್ ನೆಪದಲ್ಲಿ ನಾಲ್ವರು ಅಪರಿಚಿತ ಮಹಿಳೆಯರು ಮನೆ-ಮನೆಗೆ ಭೇಟಿ ನೀಡಿದ್ದು, ಮನೆಯಲ್ಲಿ ವಾಸಿಸುತ್ತಿರುವ ಮಕ್ಕಳ ಛಾಯಾಚಿತ್ರಗಳನ್ನು ತೆಗೆದುಕೊಂಡಿರುವ ಬಗ್ಗೆ ಪೋಷಕರು ಭಯಭೀತರಾಗಿದ್ದಾರೆ.

ಪ್ರೋಟೀನ್ ಪುಡಿಯನ್ನು ಉತ್ಪಾದಿಸುವ ಕಂಪನಿಯಿಂದ ಬಂದಿದ್ದೇವೆ ಎಂದು ಹೇಳಿ,ಮನೆಗಳಿಗೆ ಭೇಟಿ ನೀಡಿದ ನಾಲ್ವರು ಅಪರಿಚಿತ ಮಹಿಳೆಯರು ಮಕ್ಕಳ ಫೋಟೋವನ್ನು ತೆಗೆದು ಬಲವಂತವಾಗಿ ಪೋಷಕರಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ .

Ad Widget


Ad Widget


Ad Widget

Ad Widget


Ad Widget

ನಿಮ್ಮ ಮನೆಗೂ ಇಂತಹ ಅಪರಿಚಿತರು ಬಂದಿದ್ದಾರಾ? ಬಂದಿದ್ದರೆ ಎಚ್ಚರವಹಿಸಿ. ಮನೆಮನೆಗೆ ಬಂದು ಮನೆಯಲ್ಲಿರುವವರ ಬಗ್ಗೆ ಮಾಹಿತಿ ಕಲೆ ಹಾಕಿ ಕಳವು, ದರೋಡೆ ಮಾಡುವವರು ಹೆಚ್ಚಾಗಿ ಇರುವುದರಿಂದ ಸಾರ್ವಜನಿಕರು ಅಂಥವರ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಮತ್ತು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಬೇಕಾಗಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: