ಸುಳ್ಯ:ಕೊರೋನ ಪಾಸಿಟಿವ್ ವರದಿ ಬಂದ ದಂಪತಿ ಮನೆ ಬಿಟ್ಟು ಪರಾರಿ | ಅನ್ನ ನೀರಿಲ್ಲದೇ ಮನೆಯೊಳಗೇ ಬಂಧಿಯಾದ ವೃದ್ಧೆ ಅಸ್ವಸ್ಥ

ಸುಳ್ಯ:ಕೊರೊನಾ ಪಾಸಿಟಿವ್ ಬಂದಿರುವ ದಂಪತಿಗಳು ತನ್ನ ವೃದ್ಧ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ, ಊರು ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದ್ದು,ಇತ್ತ ದಂಪತಿಯ ವೃದ್ಧ ತಾಯಿ ಮೂರು ಊಟ ನೀರು ಸಿಗದೇ ಅಸ್ವಸ್ಥಗೊಂಡಿದ್ದು,ಸದ್ಯ ಅರೋಗ್ಯ ಇಲಾಖೆಯು ದಂಪತಿಗಳ ಹುಡುಕಾಟಕ್ಕೆ ಮುಂದಾಗಿದೆ.

 

ಸುಳ್ಯ ಪೇಟೆಯ ಆಸುಪಾಸಿನಲ್ಲಿ ಬಳೆ ಮಾರಿ ತಮ್ಮ ಜೀವನ ಸಾಗಿಸುತ್ತಿದ್ದ ದಂಪತಿಗಳಿಬ್ಬರು ವೃದ್ಧ ತಾಯಿಯ ಜತೆ ಗಾಂಧಿನಗರ ಸಂತೋಷ್ ಚಿತ್ರಮಂದಿರದ ಎದುರಿನ ಬಿಲ್ಡಿಂಗ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಆದರೆ ಕಳೆದ ವಾರ ದಂಪತಿಗಳಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಅದರ ವರದಿ ಪಾಸಿಟಿವ್ ಬಂದಿತ್ತು. ಈ ವಿಷಯ ಅರಿತ ಆ ದಂಪತಿಗಳು ಗಾಬರಿಗೊಂಡಿದ್ದು,ಶನಿವಾರ ತಾವಿದ್ದ ಮನೆಯ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ತೆರಳಿದ್ದಾರೆ. ಆರೋಗ್ಯ ಇಲಾಖೆಯವರು ಅವರು ನೀಡಿದ ವಿಳಾಸ ಹುಡುಕಿಕೊಂಡು ಬಂದಾಗ ಮನೆಗೆ ಬೀಗ ಹಾಕಿದ್ದು ಗಮನಕ್ಕೆ ಬಂದಿತಲ್ಲದೇ, ವೃದ್ಧ ತಾಯಿ ಅಶ್ವಸ್ಥಗೊಂಡಿರುವುದು ಪತ್ತೆಯಾಗಿತ್ತು.

Leave A Reply

Your email address will not be published.