ನರಿಮೊಗರು : ಜೀಗುಜ್ಜೆ ಕೊಯ್ಯುವಾಗ ವಿದ್ಯುತ್ ತಂತಿಗೆ ತಗುಲಿದ ದೋಟಿ | ತಾ.ಪಂ.ಮಾಜಿ ಸದಸ್ಯೆ ಯಶೋಧಾ ಅವರ ಪತಿ ಮೃತ್ಯು

Share the Article

ಪುತ್ತೂರು : ವಿದ್ಯುತ್ ಶಾಕ್ ನಿಂದ ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಯಶೋಧಾ ಅವರ ಪತಿ ಕೃಷ್ಣಪ್ಪ ಗೌಡ ಅವರು ಮೃತಪಟ್ಟ ಘಟನೆ ಆ.10ರಂದು ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಒತ್ತೆಮುಂಡೂರು ನಿವಾಸಿ ಕೃಷ್ಣಪ್ಪ ಗೌಡ ಮೃತ ದುರ್ದೈವಿ.

ಕೃಷ್ಣಪ್ಪ ಗೌಡ ಅವರು ಮನೆಯ ಸಮೀಪದ ಜೀಗುಜ್ಜೆ ಮರದಲ್ಲಿ ಜೀಗುಜ್ಜೆ ಕೊಯ್ಯಲು ಕೊಕ್ಕೆ ಹಿಡಿದುಕೊಂಡು ಹೋಗುವಾಗ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ.

ವಿದ್ಯುತ್ ಶಾಕ್ ಹೊಡೆದ ಕೂಡಲೇ ಕೃಷ್ಣಪ್ಪರವರು ಸ್ಥಳದಲ್ಲೇ ಬಿದ್ದಿದ್ದಾರೆ. ಕೂಡಲೇ ಆದರ್ಶ ಆಸ್ಪತ್ರೆಗೆ ಕರೆತರಲಾಗಿದ್ದು ಆದರೆ ಆದಾಗಲೇ ಕೊನೆಯುಸಿರೆಳೆದಿದ್ದಾರೆ.

Leave A Reply