ಸುಬ್ರಹ್ಮಣ್ಯ: ಪ್ರಾಧ್ಯಾಪಕನ ಕಾಮ ಕೃತ್ಯಕ್ಕೆ ಅ.ಭಾ.ವಿ.ಪ ಖಂಡನೆ | ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ತಿದ್ದಿ ತೀಡಬೇಕಾದ ಉಪನ್ಯಾಸಕನೇ ವಿದ್ಯಾರ್ಥಿನಿಯರ ಬಾಳಲ್ಲಿ ಚೆಲ್ಲಾಟವಾಡಿರುವ ಘಟನೆ ಸುಬ್ರಹ್ಮಣ್ಯದ ಪ್ರತಿಷ್ಠಿತ ಶಾಲೆಯಲ್ಲಿ ನಡೆದಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ಪೈಶಾಚಿಕ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ. ಈ ಮೊದಲು ಈತನ ಬಗ್ಗೆ ಅನೇಕ ದೂರುಗಳಿದ್ದದ್ದು ನಿಧಾನವಾಗಿ ಹೊರಬರುತ್ತಿದೆ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ಸಂತ್ರಸ್ತೆಗೆ ನ್ಯಾಯ ಒದಗಬೇಕು. ಕುಕ್ಕೆ ಸುಬ್ರಹ್ಮಣ್ಯನ ಪೋಷಣೆಯಲ್ಲಿರುವ ವಿದ್ಯಾಸಂಸ್ಥೆ ಗೆ ಕೆಟ್ಟ ಹೆಸರು ತಂದ ಈತನನ್ನು ಈ ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಈ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಹಾಗೂ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಅ.ಭಾ.ವಿ.ಪ ಉಗ್ರವಾಗ ಹೋರಾಟದ ಎಚ್ಚರಿಕೆ ನೀಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

error: Content is protected !!
Scroll to Top
%d bloggers like this: