ಎಸ್.ಎಸ್.ಎಲ್.ಸಿ.ಯಲ್ಲಿ ಸವಣೂರು ವಿದ್ಯಾರಶ್ಮಿಗೆ 100% ಫಲಿತಾಂಶದೊಂದಿಗೆ 10 ವಿಶಿಷ್ಟ ಶ್ರೇಣಿ

ಜುಲೈ 2021ರಲ್ಲಿ ಜರುಗಿದ ಹತ್ತನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯಕ್ಕೆ ಉತ್ತಮ ಫಲಿತಾಂಶ ಲಭ್ಯವಾಗಿದೆ.

 

ಪರೀಕ್ಷೆಗೆ ಹಾಜರಾದ ಒಟ್ಟು 32 ವಿದ್ಯಾರ್ಥಿಗಳ ಪೈಕಿ 10 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. (1. ಮುಜೂರು ಮನೆ ಐತೂರು ಸುಂಕದಕಟ್ಟೆಯ ಅಬ್ದುಲ್ ಸತ್ತಾರ್ ಮತ್ತು ಆಯಿಷಾ ಇವರ ಮಗಳು ಶಮ್ರೀನಾ (623), 2. ವಿದ್ಯಾನಗರ, ಬೀದರ್‍ನ ರಮೇಶ್ ಮತ್ತು ಶ್ರೀದೇವಿ ಇವರ ಮಗಳು ಹರ್ಷಿತಾ (617), 3. ಕಾರ್ಲಾಡಿ ಕುದ್ಮಾರ್‍ನ ಲೋಕನಾಥ್ ಮತ್ತು ಶಶಿಕಲಾ ಇವರ ಮಗ ತೇಜಸ್ ಕೆ. (614), 4. ಬಂಬಿಲ ಪಾಲ್ತಾಡಿಯ ಅನ್ನಪೂರ್ಣಪ್ರಸಾದ್ ರೈ ಮತ್ತು ಪ್ರತಿಮಾ ಪಿ. ರೈ ಇವರ ಮಗಳು ವೃಷಿಕಾ ರೈ ಬಿ. (609), 5. ಯೆಳವಾರ ವಿಜಯಪುರದ ಬಾಬು ಗೌಡರ ಮತ್ತು ಲಲಿತಾ ಇವರ ಮಗಳು ರಾಜೇಶ್ವರಿ ಬಿ. ಬೀಡಗೊಂಡ (568), 6. ಇಂಡಿ ವಿಜಯಪುರದ ನಿಂಗೊಂಡಪ್ಪ ಮತ್ತು ಸಿದ್ದಮ್ಮ ಇವರ ಮಗ ಅಭಿಷೇಕ್ ನಿಂಗೊಂಡಪ್ಪ ಬಗಲಿ (562), 7. ಬೀರುಸಾಗು ಬೆಳ್ಳಾರೆಯ ಚಂದ್ರಶೇಖರ ಗೌಡ ಮತ್ತು ಸುಮಿತ್ರಾ ಬಿ.ಸಿ. ಇವರ ಮಗಳು ಮಾನ್ವಿ ಬಿ.ಸಿ. (546), 8. ಕುಮಾರಮಂಗಲ ಪುಂಚಪ್ಪಾಡಿಯ ಉಮೇಶ್ ಎಂ. ಮತ್ತು ಶೀಲಾವತಿ ಕೆ. ಇವರ ಮಗ ಪ್ರಣವ್ ಕೆ.ಯು. (537), 9. ಯೆಳವಾರ ವಿಜಯಪುರದ ಮಹಾಂತ್ ಗೌಡ್ ಮತ್ತು ಸುಲೋಚನಾ ಇವರ ಮಗಳು ಸೌಖ್ಯಾ ಕಾನಾಪುರ (533) ಮತ್ತಗು 10. ಇಂಚಗೇರಿ ವಿಜಯಪುರದ ಕಾಶೀನಾಥ್ ಮತ್ತು ಶಾರದಾ ಇವರ ಮಗ ಪವನ್ ಕಾಶೀನಾಥ್ ಜಾಧವ್ (533).
ಇನ್ನುಳಿದಂತೆ 14 ಮಂದಿ ಪ್ರಥಮ ಶ್ರೇಣಿಯಲ್ಲಿ, 7 ಮಂದಿ ದ್ವಿತೀಯ ಶ್ರೇಣಿಯಲ್ಲಿ ಮತ್ತು ಒಬ್ಬ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಒಟ್ಟು ನೂರು ಶೇಕಡಾ ಫಲಿತಾಂಶ ಲಭ್ಯವಾಗಿದೆ.

ಉತ್ತಮ ಫಲಿತಾಂಶದ ಸಾಧನೆಗೈದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಮತ್ತು ಶ್ರಮಿಸಿದ ಬೋಧಕ-ಬೋಧಕೇತರ ವರ್ಗದವರನ್ನು ಶಾಲಾ ಸಂಚಾಲಕ ರೊ. ಕೆ. ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಇಂ. ಅಶ್ವಿನ್ ಎಲ್. ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.

Leave A Reply

Your email address will not be published.