ಹನಿಟ್ರ್ಯಾಪ್ ಪ್ರಕರಣ : ಇನ್ನೋರ್ವ ಆರೋಪಿಯ ಬಂಧನ
ಪುತ್ತೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಅನಾಮಧೇಯ ನಂಬರ್ನಿಂದ ಯುವಕರೊಬ್ಬರಿಗೆ ಮಸೇಜ್ ಕಳುಹಿಸಿ ಪರಿಚಯ ಮಾಡಿಸಿಕೊಂಡು ಬಳಿಕ ವಿಡಿಯೋ ಕಾಲ್ ಮಾಡಿ ಬಟ್ಟೆ ಬರೆಗಳನ್ನು ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ತನ್ನ ಸಹಚರರೊಂದಿಗೆ ಸೇರಿಕೊಂಡು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ರೂ. 30ಲಕ್ಷ ಹಣ ಪಡೆದುಕೊಂಡ ಬಗ್ಗೆ ದೂರು ನೀಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು,ಈಗ ಇನ್ನೋರ್ವ ಆರೋಪಿ ಅಬ್ದುಲ್ ನಾಸೀರ್ ನಿಡ್ಯಾಣ ಅವರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.