ಗುಡಿಸಲಿನಲ್ಲಿ ಸವಿನಿದ್ರೆಯಲ್ಲಿದ್ದವರ ಪಾಲಿಗೆ ಯಮರೂಪಿಯಾಗಿ ಬಂದ ಟ್ರಕ್ | ಸ್ಥಳದಲ್ಲೇ 8 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

Share the Article

ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಹಲವು ಗುಡಿಸಲುಗಳಿಗೆ ನುಗ್ಗಿದ ಪರಿಣಾಮವಾಗಿ ನಿದ್ದೆಯಲ್ಲಿದ್ದ ಎಂಟು ಜನರು ಸ್ಥಳದಲ್ಲಿಯೇ ಮೃತಪಟ್ಟ ಭೀಕರ ಘಟನೆ ಗುಜರಾತ್‌ನ ಅಮೇಲಿ ಜಿಲ್ಲೆಯ ಸವರ್ಕುಂಡ್ಲಾದ ಬರ್ಹಾಡಾ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಟ್ರಕ್ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಬಳಿಕ ಹೊಂಡಕ್ಕೆ ಉರುಳಿದ ಪರಿಣಾಮ, 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾವರಕುಂಡ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆಗೆ ಕಾರಣನಾದ ಟ್ರಕ್ ಚಾಲಕನನ್ನು ಈಗಾಗಲೇ ಬಂಧಿಸಲಾಗಿದ್ದು, ಆತ ಮದ್ಯ ಸೇವಿಸಿರುವ ಕುರಿತು ಅನುಮಾನ ಇದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುವುದಾಗಿ ಟ್ವಿಟ್ ಮಾಡಿದ್ದು, ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Leave A Reply