ಗುತ್ತಿಗಾರು : ಸಚಿವ ಅಂಗಾರ ಅವರಿಂದ ವಿದ್ಯುತ್ ಸಬ್ ಸ್ಟೇಶನ್ ಗೆ ಪ್ರಾಯೋಗಿಕ ಚಾಲನೆ | ಜನ ಒತ್ತಡ ತಂದಾಗ ಅಭಿವೃದ್ಧಿ ಕಾರ್ಯಗಳಿಗೆ ವೇಗ

ಗುತ್ತಿಗಾರಿನ ಬಹುದಿನಗಳ ಬೇಡಿಕೆಯಾಗಿದ್ದ 33/11ಕೆವಿ ವಿದ್ಯುತ್‌ ಸಬ್ ಸ್ಟೇಶನ್ ಸುಮಾರು 13 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಪ್ರಾಯೋಗಿಕ ವಿದ್ಯುತ್‌ ಚಾಲನೆ ನೀಡಿ ಮಾತನಾಡಿದರು. ಜನ ಒತ್ತಡ ತಂದಾಗ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತದೆ. ಜತೆಗೆ ಜನ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದಾಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧ್ಯ ಎಂದರು.

 

ಬೆಳ್ಳಾರೆಯಿಂದ ಗುತ್ತಿಗಾರಿಗೆ ಹೊಸದಾಗಿ ಅಳವಡಿಸಿರುವ ವಿದ್ಯುತ್‌ ಲೈನ್ ಬಾಳಿಲ, ನಿಂತಿಕಲ್ಲು, ಪಂಜ, ಬಳ್ಳಕ್ಕ ಮಾರ್ಗವಾಗಿ ಗುತ್ತಿಗಾರಿನ ಮೊಗ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಬ್ ಸ್ಟೇಶನ್ ಗೆ ವಿದ್ಯುತ್ ಸಂಪರ್ಕಗೊಳ್ಳಲಿದೆ. ಈ ವೇಳೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ, ತಾಂತ್ರಿಕ ನಿರ್ದೇಶಕಿ ಪದ್ಮಾವತಿ , ಮುಖ್ಯ ಇಂಜಿನಿಯರ್ ಪುಷ್ಪಾವತಿ, ಅಧೀಕ್ಷಕ ಇಂಜಿನಿಯರ್ ಮಂಜಪ್ಪ, ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ , ಸುಬ್ರಹ್ಮಣ್ಯ ಉಪವಿಭಾಗದ ಎಇಇ ಚಿದಾನಂದ, ಸುಳ್ಯ ಎಇಇ ಹರೀಶ್ ನಾಯ್ಕ್, ಗುತ್ತಿಗಾರು ಶಾಖಾ ಜೆಇ ಲೋಕೇಶ್ ಎಣ್ಣೆಮಜಲು, ಬೆಳ್ಳಾರೆ ಜೆಇ ಪ್ರಸಾದ್, ಪಂಜ ಜೆಇ ಹರಿಕೃಷ್ಣ, ಕಡಬ ಜೆಇ ಸತ್ಯನಾರಾಯಣ, ಸಿವಿಲ್ ಜೆಇ ಸುನಿಲ್, ಗುತ್ತಿಗೆದಾರರಾದ ಜ್ಯೋತಿ ಇಲೆಕ್ಟ್ರೀಕಲ್ ನ ಸೂರ್ಯನಾರಾಯಣ, ಕಾಮಗಾರಿ ನಿರ್ವಹಿಸಿದ ಸುಧಾ ಇಲೆಕ್ಟ್ರೀಕಲ್ ಬಾಲಕೃಷ್ಣ ಕೊಳತ್ತಾಯ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಮಾಜಿ ತಾ.ಪಂ.ಅಧ್ಯಕ್ಷ ಮುಳಿಯ ಕೇಶವ ಭಟ್, ಗ್ರಾ.ಪಂ.ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಉಪಾಧ್ಯಕ್ಷ ವಿನೋದ್ ಕುಮಾರ್ ಮುಂಡೋಡಿ, ಸಹಕಾರಿ ಸಂಘದ ನಿರ್ದೇಶಕ ನವೀನ್ ಬಾಳುಗೋಡು, ಗುತ್ತಿಗಾರು ಗ್ರಾ.ಪಂ.ಅಧ್ಯಕ್ಷೆ ರೇವತಿ ಆಚಳ್ಳಿ, ಸದಸ್ಯರಾದ ಹರೀಶ್ ಕೊಯಿಲ, ಭರತ್ ಕೆ.ವಿ., ಜಗದೀಶ್ ಬಾಕಿಲ, ಮಂಜುಳಾ ಮುತ್ಲಾಜೆ,ಎಂ.ಕೆ.ಶಾರದಾ, ಗುತ್ತಿಗಾರು ರಬ್ಬರ್ ಸೊಸೈಟಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ಡಾ.ರಾಮಯ್ಯ ಪಂಜ, ಲಿಗೋಧರ ಆಚಾರ್ಯ, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಸತ್ಯನಾರಾಯಣ ಭಟ್ ಮೊಗ್ರ, ವಸಂತ್ ಕುಮಾರ್ ಕೆದಿಲ, ಸೋಮಶೇಖರ ಪೈಕ,ಮಾಯಿಲಪ್ಪ ಸಂಕೇಶ, ಹರಿಶ್ಚಂದ್ರ ಕೇಪಳಕಜೆ, ಮಾಜಿ.ಜಿ.ಪಂ.ಸದಸ್ಯ ಭರತ್ ಮುಂಡೋಡಿ, ಮಡಪ್ಪಾಡಿ ಗ್ರಾ.ಪಂ.ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಉದಯಕುಮಾರ್ ಡಿ.ಆರ್. ದೇರಪ್ಪಜ್ಜನಮನೆ, ಹಾಗೂ ಮೆಸ್ಕಾಂ ಸಿಬ್ಬಂದಿಗಳು, ಗುತ್ತಿಗಾರಿನ ವರ್ತಕರು ಉಪಸ್ಥಿತರಿದ್ದರು.

Leave A Reply

Your email address will not be published.