ಎಡಮಂಗಲ : ರೈಲಿನಡಿಗೆ ಬಿದ್ದು ಯುವಕನೋರ್ವ ಸಾವು

ಕಡಬ : ಯುವಕನೋರ್ವ ರೈಲಿನ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಎಡಮಂಗಲದಲ್ಲಿ ಸಂಭವಿಸಿದೆ.

 

ಕಡಬ ತಾಲೂಕಿನ ಎಡಮಂಗಲದ ಪಟ್ಲ ದಡ್ಡು ಕುಶಾಲಪ್ಪ ಯಾನೆ ಪೂವಪ್ಪ ನಾಯ್ಕರ ಪುತ್ರ ಭರತ್(24) ಮೃತ ಯುವಕ ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ಎಡಮಂಗಲದ ಟೈಲರ್ ಅಂಗಡಿಗೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ಅಡಿಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಯುವಕ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದ.

ಈತನ ಅಣ್ಣ ಮೂರು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು,ತಾಯಿ ಅನಾರೋಗ್ಯದಿಂದ ಕಳೆದ ವರ್ಷ ನಿಧನರಾಗಿದ್ದರು.ಸಹೋದರಿಯನ್ನು ವಿವಾಹ ಮಾಡಿಕೊಡಲಾಗಿದೆ.

ಇದ್ದ ಮಗನನ್ನು ಕಳೆದುಕೊಂಡು ಈತನ ಅಪ್ಪ ಪೂವಪ್ಪ ನಾಯ್ಕ ಅವರು ಅನಾಥರಾದಂತಾಗಿದೆ.

ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.