ದ.ಕ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ನಾಳೆಯಿಂದ ವೀಕೆಂಡ್ ಕರ್ಫ್ಯೂ ಜಾರಿ

ರಾಜ್ಯದಲ್ಲಿ ಕೊರೋನಾ 3ನೇ ಅಲೆಯ ಮುನ್ಸೂಚನೆ ನೀಡಿದ್ದು, ಈ ಸಂದರ್ಭದಲ್ಲಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

 

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಪ್ಯೂ ಜಾರಿಯಾಗಲಿದೆ. ಇದರೊಂದಿಗೆ ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಬಿಗಿಯಾಗಿ ಜಾರಿಗೊಳ್ಳಲಿದೆ.

ಈಗಾಗಲೇ ಗಡಿ ಜಿಲ್ಲೆಗಳಲ್ಲಿ ಕಠಿಣ ನಿಯಮಗಳನ್ನು ಅಳವಡಿಸಲಾಗಿದ್ದು, ವಾರಾಂತ್ಯದ ಕರ್ಫ್ಯೂ ಸೇರಿ ಮತ್ತಷ್ಟು ಬಿಗಿ ಕ್ರಮಗಳು ಜಾರಿಯಾಗಲಿವೆ ಎಂದು ತಿಳಿದುಬಂದಿದೆ.

ನಾಳೆ ಏನಿರುತ್ತೆ, ಏನಿರಲ್ಲ?

*ಸರ್ಕಾರಿ ಕಚೇರಿ ಹಾಗೂ 24 ಗಂಟೆ ಕಾರ್ಯಾಚರಿಸುವ
ಕೈಗಾರಿಕೆಗೆ ಅನುಮತಿ

*ಬೆಳಗ್ಗೆ 5ರಿಂದ ಮಧ್ಯಾಹ್ನ 2ರ ತನಕ ಅಗತ್ಯ ವಸ್ತು ಪಡೆಯಲು ಅವಕಾಶ. (ಹಾಲು, ದಿನಸಿ, ಮೀನು, ಮಾಂಸ, ಹಣ್ಣು-ಹಂಪಲು ಮಾರಾಟಕ್ಕೆ ಅನುಮತಿ)

*ಮದ್ಯ ಮಾರಾಟ – ಪಾರ್ಸೆಲ್ ಮಾತ್ರ ಅವಕಾಶ (ಬೆಳಗ್ಗೆ 5ರಿಂದ ಮಧ್ಯಾಹ್ನ 2)

*ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್, ಹೋಂ ಡೆಲಿವರಿಗೆ ಅವಕಾಶ

*ರಾಜಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕೃತಿಕ,
ಧಾರ್ಮಿಕ ಸಭೆ, ಸಮಾರಂಭ ನಿಷೇಧ

*ವಿಮಾನ ನಿಲ್ದಾಣ, ರೈಲ್ವೆ ಪ್ರಯಾಣಕ್ಕೆ ಅನುಮತಿ – ಪ್ರಯಾಣದ ಟಿಕೆಟ್ ಕಡ್ಡಾಯ

*ಮದುವೆ 100 ಜನರೊಂದಿಗೆ ನಡೆಸಲು ಅವಕಾಶ

*ಅಂತಿಮ ಸಂಸ್ಕಾರಕ್ಕೆ 20 ಜನರಿಗೆ ಅವಕಾಶ

*ಇನ್ನುಳಿದಂತೆ ಬೇರೆಲ್ಲಾ ವ್ಯವಹಾರಗಳಿಗೆ ಅನುಮತಿ ಇರುವುದಿಲ್ಲ.

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬೀದರ್, ಬೆಳಗಾವಿ, ಕಲ್ಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ.

Leave A Reply

Your email address will not be published.