ನದಿಗೆ ಹಾರಿ ನವ ವಿವಾಹಿತೆ ಆತ್ಮಹತ್ಯೆ | 5 ತಿಂಗಳ‌ ಹಿಂದೆ ಪ್ರೇಮ ವಿವಾಹವಾದ ಯುವತಿ

ಐದು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆಯೋರ್ವಳು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಹಾಸನ ಜಿಲ್ಲೆಯಿಂದ ವರದಿಯಾಗಿದೆ.

 

ಜೀವ ಕಳೆದುಕೊಂಡಾಕೆಯನ್ನು ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ(22) ಎಂದು ಗುರುತಿಸಲಾಗಿದೆ. ಪೂಜಾಳಿಗೆ ಈ ಹಿಂದೆ ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ಫೋನ್‍ನಲ್ಲಿ ಪರಿಚಯವಾಗಿದ್ದ ಸಕಲೇಶಪುರ ಮೂಲದ ದೀಪಕ್‍ನ್ನು ಪೂಜಾ ಪ್ರೀತಿಸುತ್ತಿದ್ದಳು.

ಹೀಗಾಗಿ ಮನೆಯವರನ್ನು ವಿರೋಧಿಸಿ ದೀಪಕ್ ಜೊತೆ ಓಡಿ ಬಂದಿದ್ದ ಪೂಜಾ, ಕಳೆದ ಮಾರ್ಚ್ 20 ರಂದು ಮದುವೆಯಾಗಿದ್ದಳು.

ಮದುವೆ ನಂತರ ದೀಪಕ್ ಮತ್ತು ಆಕೆಯ ಮನೆಯವರು ನಿತ್ಯವೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ನಿತ್ಯವೂ ದೈಹಿಕ ಹಲ್ಲೆ ನಡೆಸಿ ಹಿಂಸೆ ನೀಡುತ್ತಿದ್ದರು. ಹೀಗಾಗಿ ಇಂದು ಪೂಜಾ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೂಜಾ ಪೋಷಕರು, ಆಕೆಯ ಪತಿ ದೀಪಕ್ ವಿರುದ್ಧ ಆರೋಪ ಮಾಡಿದ್ದಾರೆ.

Leave A Reply

Your email address will not be published.