ಸರ್ವೆ: ಷಣ್ಮುಖ ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಅಭಿಯಾನ

ಸವಣೂರು : ಶ್ರೀ ಷಣ್ಮುಖ ಯುವಕ ಮಂಡಲ (ರಿ.) ಸರ್ವೆ ಇದರ ವತಿಯಿಂದ ನೆಹರೂ ಯುವ ಕೇಂದ್ರ ಮಂಗಳೂರು, ಪುತ್ತೂರು ತಾಲೂಕು ಯುವಜನ ಒಕ್ಕೂಟ ಇದರ ಸಹಯೋಗ‌ದಲ್ಲಿ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮದ ಪ್ರಯುಕ್ತ ಸ್ವತ್ಛತಾ ಅಭಿಯಾನ, ಕೋವಿಡ್ ಬಾಧಿತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ವಿತರಣೆ ಸರ್ವೆ ಗ್ರಾಮದಲ್ಲಿ ನಡೆಯಿತು. ಯುವಕ ಮಂಡಲದ ಗೌರವ ಸಲಹೆಗಾರರಾದ ನಿವೃತ್ತ ಮುಖ್ಯ ಗುರುಗಳಾದ ಶ್ರೀನಿವಾಸ್ ಹೆಚ್.ಬಿ ಮಾತನಾಡಿ ಯುವಕ ಮಂಡಲದ ವತಿಯಿಂದ ಸಕಾರಾತ್ಮಕ, ಸಮಾಜಮುಖಿ ಚಟುವಟಿಕೆಗಳನ್ನು ಸಕ್ರಿಯವಾಗಿ ಹಮ್ಮಿಕೊಳ್ಳುತ್ತಿದ್ದೇವೆ. ಯುವಕ ಮಂಡಲದ ಗೌರವ ಸಲಹೆಗಾರನಾಗಿ ಯುವ ಸಬಲೀಕರಣಕ್ಕಾಗಿ ಕೆಲಸ ಮಾಡಲು ಸಂತೋಷವಿದೆ ಎಂದರು.

 

ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಕರುಂಬಾರು, ಅಧ್ಯಕ್ಷರಾದ ಗೌತಮ್ ರಾಜ್ ಕರಂಬಾರು, ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಖಜಾಂಚಿ ಗುರುರಾಜ್ ಪಟ್ಟೆಮಜಲು, ಪದಾಧಿಕಾರಿಗಳಾದ ರಾಜೇಶ್ ಎಸ್ ಡಿ, ಶರೀಫ್ ಎಸ್ ಎಂ, ತಿಲಕ್ ರಾಜ್ ಕರಂಬಾರು, ನಾಗೇಶ್ ಪಟ್ಟೆಮಜಲು, ಕೀರ್ತನ್ ಸರ್ವೆದೋಳಗುತ್ತು, ಹರೀಶ್ ಪಾಲೆತ್ತಗುರಿ, ಹರೀಶ್ ಆಲೇಕಿ, ಗೌತಮ್ ಪಟ್ಟೆಮಜಲು, ನಂದನ್ ಸರ್ವೆದೋಳಗುತ್ತು, ಚಿರಾಗ್ ರೈ ಮೇಗಿನಗುತ್ತು, ಸದಸ್ಯರಾದ ಜೀವನ್ ಎಸ್ ಡಿ, ಮಧು ಸುವರ್ಣ ಸೊರಕೆ, ಕ್ಷಿತಿಜ್ ಸೊರಕೆ ಭಾಗವಹಿಸಿದರು.

Leave A Reply

Your email address will not be published.