ಕಟ್ಟಡ ಕಾರ್ಮಿಕರ ಅಗತ್ಯ ಬೇಡಿಕೆಗಳನ್ನು ಈಡೇರಿಸುವಂತೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪ ಕಾರ್ಮಿಕ ಆಯುಕ್ತರಿಗೆ ಮನವಿ
ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ನೀಡುವ ಆಹಾರ ಕಿಟ್ಟಲ್ಲಿ ರಾಜಕೀಯ ನಡೆಸಲಾಗುತ್ತಿದೆ ಶಾಸಕರ ಅದನ್ನು ತಾನೆ ನೀಡುವುದೆಂದು ಹೇಳಿದ್ದರು ಎಲ್ಲ ಕಟ್ಟಡ ಕಾರ್ಮಿಕರಿಗೆ ವಿತರಿಸದೆ ತಾರತಮ್ಯವನ್ನು ಎಸಗಲಾಗುತ್ತಿದೆ.
ಪಂಚಾಯತಿಗಳಿಗೆ ಶಾಸಕರ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾರ್ಮಿಕ ಇಲಾಖೆ ನೀಡಿದ ಕಟ್ಟಡ ಕಾರ್ಮಿಕರ ಪಟ್ಟಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರುತು ಮಾಡಿ ಕೆಲವರಿಗೆ ಮಾತ್ರ ನೀಡಲಾಗುತ್ತಿದೆ.
ಬೆಳ್ತಂಗಡಿಯ ಸಾವಿರಾರು ಕಟ್ಟಡ ಕಾರ್ಮಿಕರಿಗೆ ಇನ್ನೂ ದೊರಕಿಲ್ಲ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕೋವಿಡ್ ಪರಿಹಾರ 10000 ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಪರಿಹಾರ 3000 ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಎಲ್ಲರಿಗೂ ಸಿಗುವಂತೆ ಕ್ರಮ ಕೈಗೊಳ್ಳಬೇಕು ಕಳೆದ ವರ್ಷ ಸೂಚಿಸಿದ ರೂ 5000 ಕೂಡ ಹಲವು ಜನ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಬಂದಿರುವುದಿಲ್ಲ ಕೂಡಲೇ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮನೆ ಕಟ್ಟಲು ಕನಿಷ್ಠ 5 ಲಕ್ಷ ರೂಪಾಯಿಗಳನ್ನು ಸಹಾಯಧನವನ್ನು ಮಂಜೂರು ಕೊಡಿಸುವಂತೆ ಬೆಳ್ತಂಗಡಿ ತಹಶಿಲ್ದಾರರ ಮೂಲಕ ಉಪ ಕಾರ್ಮಿಕ ಆಯುಕ್ತರು ವಿಭಾಗದವರಿಗೆ ಮನವಿಯನ್ನು ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ವಸಂತ ಬಂಗೇರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೆ ಶೈಲೇಶ್ ಕುಮಾರ್ ಕುತ್ರೋಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ರಂಜನ್ ಗೌಡ, ಕಾಂಗ್ರೆಸ್ ಮುಖಂಡ ಅಭಿನಂದನ್ ಹರೀಶ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ಪಿ ಬೆಳಾಲು ಪ್ರವೀಣ್ ವಿ.ಜಿ, ನಗರ ಪಂಚಾಯತ್ ಸದಸ್ಯ ಜಗದೀಶ್ ಬೆಳ್ತಂಗಡಿ,ನೇಮಿರಾಜ್ ಕಿಲ್ಲೂರ್,ಮೆಹಬೂಬ್ ಬೆಳ್ತಂಗಡಿ ನಾಗರಾಜ್ ಎಸ್ ಲೃಾಲ ಹಾಗು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.