ಜಿಲ್ಲೆಯ ಕೆಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ದಿಢೀರ್ ವರ್ಗಾವಣೆ | ಇಲ್ಲಿದೆ ವರ್ಗಾಯಿತ ಅಧಿಕಾರಿಗಳ ಪಟ್ಟಿ

ಜಿಲ್ಲೆಯ ಕೆಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ|ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಆಡಳಿತಾತ್ಮಕ ಹಿತದೃಷ್ಟಿಯಿಂದ, ಉತ್ತಮ ಹಾಗೂ ಭ್ರಷ್ಟಾಚಾರ ರಹಿತ ಸೇವೆಗಾಗಿ ಈ ಬದಲಾವಣೆ ಆಗಿದ್ದು,ವರ್ಗಾವಣೆ ಗೊಂಡ ಅಧಿಕಾರಿಗಳಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಕೋರಲಾಗಿದೆ.

 

ವರ್ಗಾವಣೆ ಗೊಂಡ ಅಭಿವೃದ್ಧಿ ಅಧಿಕಾರಿಗಳ ಪಟ್ಟಿ ಇಲ್ಲಿದೆ:

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ಪಿಡಿಓ ಆನಂದ ಎ. ಅವರು ಕುಟ್ರುಪ್ಪಾಡಿ ಗ್ರಾ.ಪಂ.ಗೆ, ಸುಳ್ಯ ತಾಲೂಕಿನ ಐವರ್ನಾಡು ಗ್ರಾ.ಪಂ. ಪಿಡಿಓ ಯು.ಡಿ.ಶೇಖರ್ ಅವರು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ.ಗೆ, ಕಡಬ ತಾಲೂಕಿನ ಸುಬ್ರಹ್ಮಣ್ಯ ಪಿಡಿಓ ಮುತ್ತಪ್ಪ ಡವಲಗಿ ಅವರು ಬಿಳಿನೆಲೆ ಗ್ರಾ.ಪಂ.ಗೆ, ಒಳಮೊಗ್ರು ಗ್ರಾ.ಪಂ.ನ ಪಿಡಿಓ ಗೀತಾ ಬಿಎಸ್. ಅವರು ಮುಂಡೂರು ಗ್ರಾ.ಪಂ.ಗೆ, ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾ.ಪಂ. ಪಿಡಿಓ ಅವಿನಾಶ್ ಬಿ.ಆರ್. ಅವರು ಒಳಮೊಗ್ರು ಗ್ರಾ.ಪಂ.ಗೆ ಕಡಬ ತಾಲೂಕಿನ ಕಾಣಿಯೂರು ಗ್ರಾ.ಪಂ. ಪಿಡಿಓ ರಾಜಲಕ್ಷ್ಮೀ ಅವರು ಸುಳ್ಯ ತಾಲೂಕಿನ ದೇವಚಳ್ಳಿ ಗ್ರಾ.ಪಂ.ಗೆ, ಐತ್ತೂರು ಗ್ರಾ.ಪಂ. ಪಿಡಿಓ ಸುಜಾತ ಕೆ. ಅವರು ನೆಲ್ಯಾಡಿ ಗ್ರಾ.ಪಂ.ಗೆ, ನೆಲ್ಯಾಡಿ ಗ್ರಾ.ಪಂ. ಪಿಡಿಓ ಮಂಜುಳಾ ಎಸ್. ಅವರು ಐತ್ತೂರು ಗ್ರಾ.ಪಂ.ಗೆ, ಕುಡಿಪ್ಪಾಡಿ ಪಿಡಿಓ ಹೊನ್ನಮ್ಮ ಕೆ. ಅವರು ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದಾರೆ.

Leave A Reply

Your email address will not be published.