ಸೆಮಿಫೈನಲ್ ನಲ್ಲಿ ಮುಗ್ಗರಿಸಿದ ಪುರುಷರ ಹಾಕಿ ತಂಡ | ಚಿನ್ನದ ಪದಕದ ಕನಸು ಭಗ್ನ, ಇನ್ನು ಕಂಚಿಗಾಗಿ ಹೋರಾಟ

Share the Article

ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಹಾಕಿ ವಿಭಾಗದ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ, ಬೆಲ್ಜಿಯಂ ತಂಡದ ಎದುರು ಸೋಲನ್ನು ಅನುಭವಿಸಿದ್ದು, ಭಾರತದ ಚಿನ್ನದ ಪದಕ ಗೆಲ್ಲುವ ಕನಸು ಭಗ್ನವಾಗಿದೆ.

ಬೆಲ್ಜಿಯಂ ಎದುರು ಭಾರತ 5-2 ಗೋಲುಗಳ ಅಂತರದ ಸೋಲನ್ನು ಕಂಡಿದ್ದು, ಮುಂದಿನ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಆಡಲಿದೆ.

ಸೆಮಿಫೈನಲ್‌ನ ಕೊನೆಯ 15 ನಿಮಿಷದ ಅವಧಿಯಲ್ಲಿ ತಂಡದ ಗತಿಯನ್ನೇ ಬದಲಾಯಿಸಿತು. 3ನೇ ಕ್ವಾರ್ಟ‌್ರನಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಬೆಲ್ಡಿಯಂ ಎದುರು 2-2 ಗೋಲುಗಳೊಂದಿಗೆ ಸಮಬಲ ಸಾಧಿಸಿತ್ತು. ಆದರೆ, ಅಲೆಕ್ಸಾಂಡರ್ ಹೆಂಡ್ರಿಕ್ ಬಾರಿಸಿದ ಹ್ಯಾಟ್ರಿಕ್ ಗೋಲು ಭಾರತದ ಪಾಲಿಗೆ ಮುಳುವಾಯಿತು.

ಫೈನಲ್ ಕ್ವಾರ್ಟ‌್ರನಲ್ಲಿ ಒಂದರ ಹಿಂದಂತೆ ಅಲೆಕ್ಸಾಂಡರ್ ಹೆಂಡ್ರಿಕ್ ಎರಡು ಗೋಲು ಬಾರಿಸಿದರು. ಅಂತಿಮವಾಗಿ 5-2 ಅಂತರದ ಗೋಲುಗಳಿಂದ ಬಿಲ್ಜಿಯಂ ವಿಜಯ ಸಾಧಿಸಿದೆ. ವಿಶ್ವ ಎಡರನೇ ಶ್ರೇಯಾಂಕ ಹೊಂದಿರುವ ಬೆಲ್ಜಿಯಂ ತಂಡ ಎದುರು ಆಡುವುದು ಭಾರತಕ್ಕೆ ಕಠಿಣ ಸವಾಲು ಎಂದೇ ಪರಿಗಣಿಸಲಾಗಿತ್ತು.

ಟೀಮ್ ಇಂಡಿಯಾ ಪರ ಹಮನ್‌ಪ್ರೀತ್ ಸಿಂಗ್ ಮತ್ತು ಮನ್ ದೀಪ್ ಸಿಂಗ್ ಗೋಲು ಗಳಿಸಿದರೂ ಅದು ಸಾಕಾಗಲಿಲ್ಲ. ಆದರೆ, ಬಿಲ್ಜಿಯಂ ತಂಡಕ್ಕೆ ಪೆನಾಲ್ಟಿ ಕಾರ್ನರ್ ವರವಾಗಿ ಪರಿಣಮಿಸಿತು.

ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಗೆಲುವುಗಳು ಮತ್ತು ಸೋಲುಗಳು ಜೀವನದ ಭಾಗವಾಗಿದೆ’ ಎಂದು ಸಾಂತ್ವನ ಹೇಳಿದ್ದಾರೆ. ಜೊತೆಗೆ, ‘ನಮ್ಮ ಪುರುಷರ ಹಾಕಿ ತಂಡ ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ. ಇದೇ ಮುಖ್ಯವಾಗಿ ಗಣನೆಗೆ ಬರುವುದು’ ಎಂದಿದ್ದಾರೆ.

ಭಾರತದ ಹಾಕಿ ತಂಡ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪೂಲ್ ಸ್ಟೇಜ್ ವೇಳೆ 3-0 ಅಂತ ರದಲ್ಲಿ ಬೆಲ್ಜಿಯಂ ವಿರುದ್ಧ ಸೋತಿತ್ತು. 2016ರ ರಿಯೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಬೆಲ್ಜಿಯಂ ವಿರುದ್ಧ ಟೀಂ ಇಂಡಿಯಾ 3-1ರಲ್ಲಿ ಸೋಲು ಕಂಡಿತ್ತು.

Leave A Reply