ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಆರಂಭವಾದ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

Share the Article

ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಪ್ರಾರಂಭವಾದ ಸ್ನೇಹಿತರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

ಮಧ್ಯಪ್ರದೇಶ ಮೂಲದ ಇಬ್ಬರು ಯುವಕರು ಗ್ರಾನೈಟ್ ಕೆಲಸ ಮಾಡಿಕೊಂಡು ರಾಜಾಜಿನಗರದ ಮನೆಯಲ್ಲಿ ವಾಸವಾಗಿದ್ದರು. ಮೊನ್ನೆ ಕೆಲಸ ಮುಗಿಸಿ ಬಂದು ಸ್ವಲ್ಪ ಎಣ್ಣೆ ಬೇರೆ ತಗೊಂಡಿದ್ದರು. ಅವರಿಬ್ಬರು ಮೊಬೈಲ್ ಚಾರ್ಜ್ ಹಾಕಲು ಒಂದೇ ಸ್ವಿಚ್ ಬೋರ್ಡ್ ಬಳಕೆ ಮಾಡುತ್ತಿದ್ದರು.

ಈ ವೇಳೆ ನಾನು ಹಾಕುತ್ತೇನೆ ಎಂದು ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಕೊಲೆ ಆರೋಪಿ ಮೊಬೈಲ್ ಚಾರ್ಜ್ ಮಾಡಲು ಇಡುತ್ತಾನೆ.

ಇದಕ್ಕೆ ಮೃತ ಯುವಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಕುಪಿತಗೊಂಡ ಆರೋಪಿ, ಮೃತ ಯುವಕನಿಗೆ ಸೌದೆಯಿಂದ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.

ಈ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply