ಗ್ರಾಹಕರಿಗೆ ಶಾಕ್ ನೀಡಿದ‌ ಗೂಗಲ್ | ಸ್ಮಾರ್ಟ್ ಫೋನ್ ನಲ್ಲಿ ಯೂಟ್ಯೂಬ್, ಇಮೇಲ್ ಸೇರಿದಂತೆ ಇತರೆ ಆ್ಯಪ್ ಗಳ ಕಾರ್ಯ ಸ್ಥಗಿತ

ಕೆಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಟೆಕ್ ದೈತ್ಯ ಗೂಗಲ್ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಇನ್ಮುಂದೆ 2.3.7 ಅಥವಾ ತುಂಬಾ ಕಡಿಮೆ ವರ್ಷನ್‌ನ ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಕೆಲವೊಂದು ಖಾತೆಗಳಿಗೆ ಸೈನ್ ಇನ್ ಆಗಲು ಗೂಗಲ್ ಬೆಂಬಲಿಸುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದ್ದು, ಕೆಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ದುಬಾರಿಯಾಗಿ ಪರಿಣಮಿಸಲಿದೆ.

 

ಈ ನಿಯಮವು ಸೆಪ್ಟೆಂಬರ್ 27 ರಿಂದ ಜಾರಿಗೆ ಬರಲಿದೆ. ಗೂಗಲ್ ಬಳಕೆದಾರರಿಗೆ ಕಳುಹಿಸಿದ ಇಮೇಲ್‌ನಿಂದ ಈ ವಿಚಾರ ಬಹಿರಂಗವಾಗಿದೆ. ಸೆಪ್ಟೆಂಬರ್ ನಂತರವೂ ಗೂಗಲ್ ಆ್ಯಪ್ ಬಳಸುವುದಾದರೆ, ಕನಿಷ್ಟ ಪಕ್ಷ ಆ್ಯಂಡ್ರಾಯ್ 3.0 ಹನಿಕೂಂಬ್ ವರ್ಷನ್‌ಗೆ ಅಪ್‌ಡೇಟ್ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಇಮೇಲ್ ಸೂಚಿಸಿದೆ.

ಸೆಪ್ಟೆಂಬರ್ 27ರ ಆರಂಭದಿಂದ ಆ್ಯಂಡ್ರಾಯ್ಡ್ 2.3.7 ಮತ್ತು ಅದಕ್ಕಿಂತ ಕಡಿಮೆ ವರ್ಷನ್ ಸ್ಮಾರ್ಟ್ ಫೋನ್‌ಗಳಲ್ಲಿ ಯಾವುದೇ ಗೂಗಲ್ ಆ್ಯಪ್ಸ್ಗೆ ಲಾಗಿನ್ ಆಗಲು ಪ್ರಯತ್ನಿಸಿದರೆ, “ಯೂಸರ್ ನೇಮ್ ಅಥವಾ ಪಾಸ್‌ವರ್ಡ ಎರರ್” ಎಂಬ ಸಂದೇಶವು ಬರಲಿದೆ.

ಗೂಗಲ್ ನ ಈ ನಿಯಮದಿಂದ ಫೋನ್ ಬ್ರೌಸರ್ ಮೂಲಕ ಸೈನ್ ಇನ್ ಆಗುವ ಜಿಮೇಲ್, ಗೂಗಲ್ ಸರ್ಚ್, ಗೂಗಲ್ ಡ್ರೈವ್, ಯೂಟ್ಯೂಬ್ ಮತ್ತು ಇತರ ಗೂಗಲ್ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಆಂಡ್ರಾಯ್ಡನ ಅತ್ಯಂತ ಹಳೆಯ ವರ್ಷನ್ ಬಳಕೆದಾರರು ಬಹಳ ಕಡಿಮೆ ಇರಬಹುದು ಮತ್ತು ಗೂಗಲ್ ನಿಸ್ಸಂಶಯವಾಗಿ ಬಳಕೆದಾರರ ಡೇಟಾವನ್ನು ರಕ್ಷಿಸಲು ಮತ್ತು ಖಾತೆಯ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದೆ.

ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಕೆಲವು ಬಳಕೆದಾರರಿಗೆ ಈ ಇಮೇಲ್‌ಗಳು ಎಚ್ಚರಿಕೆಯ ಚಿಹ್ನೆಯಾಗಿ ಕಾಣುತ್ತಿವೆ. ಇದು ತಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಲು ಅಥವಾ ಫೋನ್‌ಗಳನ್ನು ಬದಲಾಯಿಸಲು ಸೂಚನೆ ನೀಡುವಂತಿದೆ.

Leave A Reply

Your email address will not be published.