ಒಂದೊಂದಾಗಿ ಹೊರ ಬೀಳುತ್ತಿದೆ ರಾಜ್ ಕುಂದ್ರಾ ಕರ್ಮಕಾಂಡಗಳು | ಬೆತ್ತಲೆ ಮಾಡಿ, ಬೆದರಿಕೆ ಒಡ್ಡಿದ ಆರೋಪ ಹೊರಿಸಿದ ಮಾಡೆಲ್

ರಾಜ್ ಕುಂದ್ರಾ ಬಗ್ಗೆ ಅನೇಕ ಆರೋಪಗಳು ಕೇಳಿ ಬರುತ್ತಿದ್ದು, ಇವರ ಮೇಲಿನ ಕೇಸ್ ಗೆ ಮತ್ತಷ್ಟು ಸಾಕ್ಷಿ ದೊರಕಂತಾಗಿದೆ. ಇದೀಗ ಮಾಡೆಲ್ ಒಬ್ಬರು ಇವರ ಬಗ್ಗೆ ಬೆತ್ತಲೆ ಮಾಡಿ ವಿಡಿಯೋ ಶೂಟ್ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

 

ಸಾಲು ಸಾಲು ಆರೋಪಗಳ ಸುರಿ ಮಳೆಯೇ ಆಗುತ್ತಿದ್ದು, ಒಂದು ಕಡೆ ನೀಲಿ ಚಿತ್ರ ತಯಾರಿಸಿರುವ ಆರೋಪ ಹೊತ್ತ ಉದ್ಯಮಿ ರಾಜ್ ಕುಂದ್ರಾರ ಪತ್ನಿ ತನ್ನ ಮತ್ತು ಗಂಡನ ಬಗ್ಗೆ ವರದಿ ಮಾಡಿದರೆ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಇನ್ನೊಂದೆಡೆ ಬಾಂಬೆ ಮಾಡೆಲ್ ಒಬ್ಬರು ನನ್ನನು ಶೋಷಿಸಿ ಬ್ಲ್ಯಾಕ್ಮೇಲ್ ಮಾಡಿರುವ ಬಗ್ಗೆ ನಗರದ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ರಾಜ್ ಕುಂದ್ರಾ ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ನೆಪ ಹೇಳಿ, ಬೆತ್ತಲೆ ದೇಹವನ್ನು ಶೂಟ್ ಮಾಡಿದ್ದಾರೆ. ಉಟ್ಟುಡುಗೆಯಲ್ಲಿ ಕೆಸರಿನಿಂದ ಮೇಲೆದ್ದು ಬರುವ ಶೂಟ್ಗೆ ಕುಂದ್ರಾ ರೂ. ಒಂದು ಲಕ್ಷ ಸಂಭಾವನೆ ನೀಡುವ ಭರವಸೆಯೂ ನೀಡಿದ್ದಾರೆ ಎಂದು ಈ ಮಾಡೆಲ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಮಾಡೆಲ್ ಇದರ ಬಗ್ಗೆ ಆಕ್ಷೇಪಣೆ ಎತ್ತಿದಾಗ ಕುಂದ್ರಾ ಆಕೆಗೆ ರೂ 3,500 ನೀಡಿ ಸುಮ್ಮನಿರುವಂತೆ ಸೂಚಿಸಿದರಂತೆ. ಇದಕ್ಕೆ ಆಕೆ ಪ್ರತಿಭಟಿಸಿದಕ್ಕೆ ಕೆರೀಯರ್ ಹಾಳು ಮಾಡುವೆ ಎಂಬ ಬೆದರಿಕೆಯನ್ನು ಕುಂದ್ರಾ ಒಡ್ಡಿದರಂತೆ.

ಇದೇ ರೀತಿ ಒಟ್ಟು 4 ವಯಸ್ಕ ಚಿತ್ರಗಳಲ್ಲಿ ನಟಿಸುವಂಥ ಅಸಾಹಾಯಕ ಸ್ಥಿತಿಗೆ ತನ್ನನ್ನು ದೂಡಲಾಯಿತು ಎಂದು ಆ ಮಾಡೆಲ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಎಷ್ಟೆಲ್ಲಾ ಘಟನೆಯ ಆರೋಪಗಳು ನೋಡಿಯೂ ಶಿಲ್ಪಾ ಶೆಟ್ಟಿ ಆಕೆಯ ಗಂಡನ ಬಗೆಗೆ ಆರೋಪ ಮಾಡಬೇಡಿ ಎಂದಿದ್ದಾರೆಯೇ ಎಂಬುದೇ ಜನರ ಪ್ರಶ್ನೆಯಾಗಿದೆ. ಮಾಡೆಲ್ ಪೋಲಿಸ್ ಬಳಿಗೆ ಹೋಗಿದ್ದೇ ಒಳ್ಳೆಯದಾಯಿತು. ನ್ಯಾಯ ಕೇಳಿ ಶಿಲ್ಪಾ ಹತ್ತಿರ ಹೋಗಿದ್ದರೆ, ಬಾಯಿ ಮುಚ್ಚದಿದ್ದರೆ, ಕೇಸ್ ಮಾಡ್ತೀನಿ ಅಂತ ನಟಿ ಹೇಳುತಿದ್ದರು ಎಂಬುವುದರಲ್ಲಿ ಸಂದೇಶವಿಲ್ಲ.

Leave A Reply

Your email address will not be published.