ಸುಬ್ರಹ್ಮಣ್ಯ : ಬೆಳ್ಳಂಬೆಳಗ್ಗೆ ಚಿರತೆ ದಾಳಿ,ಕರುವನ್ನು ಕೊಂದು ಹಾಕಿದ ಚಿರತೆ

ಸುಬ್ರಹ್ಮಣ್ಯ: ಇಲ್ಲಿನ ಕಲ್ಮಕಾರು ಗ್ರಾಮದಲ್ಲಿ ಹಟ್ಟಿಯಲ್ಲಿದ್ದ ಕರುವಿನ ಮೇಲೆ ಚಿರತೆಯೊಂದು ದಾಳಿ ಮಾಡಿ ಸೀಳಿ ತಿಂದ ಘಟನೆ ನಡೆದಿದೆ.

 

ಈ ಘಟನೆ ಜು. 31ರಂದು ನಡೆದಿದ್ದು ಮಾಡಬಾಕಿಲು ಮನೆ ಲಾವಣ್ಯ ಮಹೇಶ್ ಅವರ ಹಟ್ಟಿಗೆ ಚಿರತೆ ದಾಳಿ ಮಾಡಿ ಕರುವನ್ನು ತಿಂದು ಹಾಕಿರುವುದಾಗಿದೆ‌

ಬೆಳಗಿನ ಜಾವ ಈ ಘಟನೆ ನಡೆದಿದ್ದು ಹಟ್ಟಿಯ ಬಳಿ ತೆರಳಿದ ವೇಳೆ ಆಗಷ್ಟೇ ತಿಂದು ಹೋದದಂತಿತ್ತು. ಹಟ್ಟಿಯಲ್ಲಿ ಇನ್ನೂ ದನ ಕರುಗಳಿದ್ದು ಮನೆಯವರು ಆತಂಕಗೊಂಡಿದ್ದಾರೆ

Leave A Reply

Your email address will not be published.