ಖ್ಯಾತ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿಯನ್ನು ಕೊಂದದ್ದು ಮುಸ್ಲಿಂ ಧರ್ಮಭ್ರಾಂತರು | ಮಸೀದಿಗೆ ನುಗ್ಗಿ ಕೊಂದ ಬಗ್ಗೆ ಕೋಮು ಸಾಮರಸ್ಯ ಕೆದಕುವ ತಾಂಟ್ರೆ ಖ್ಯಾತಿಯ ಜನರದ್ದು ಯಾಕೆ ನಿರ್ಲಜ್ಜ ಮೌನ ?!

ಅಂದು ಇಡೀ ಮಾಧ್ಯಮ ಲೋಕ ಓರ್ವ ನಿಷ್ಠಾವಂತ ಪತ್ರಕರ್ತನ ಸಾವಿನ ಪ್ರಕರಣದ ವರದಿ ಮಾಡುವಲ್ಲಿ ಬಿಜಿ ಆಗಿತ್ತು. ಏಕೆಂದರೆ, ಇಲ್ಲಿ ಕಳೆದುಕೊಂಡದ್ದು ಭಾರತ ಹೆಮ್ಮೆ ಪಡುವ ಪತ್ತೇದಾರಿ ವರದಿಗಾರ ಸಿದ್ಧಿಕಿಯನ್ನು. ಇನ್ನೇನು ಆತನ ಹೊಸ ವರದಿಯೊಂದು ಮಾಧ್ಯಮದ ಮೂಲಕ ಜನರಿಗೆ ತಲುಪುವ ಮೊದಲೇ ವರದಿಗಾರನ ಕೊಲೆಯಾಗುತ್ತದೆ. ಮೊದಲಿಗೆ ಆಕಸ್ಮಿಕ ಸಾವು ಎಂದು ಪರಿಗಣಿಸಿದ್ದ ಪ್ರಕರಣದ, ಸತ್ಯಾಸತ್ಯತೆ ಇದೀಗ ಹೊರಬಿದ್ದಿದೆ.

 

ಪಾಕಿಸ್ಥಾನದೊಂದಿಗೆ ಲಾಭದಾಯಕವಾಗಿ ಗಡಿ ದಾಟುವ ವಿಚಾರದಲ್ಲಿ ಹಾಗೂ ತಾಲಿಬಾನ್- ಅಫ್ಘಾನ್ ಪಡೆ ನಡುವೆ ನಡೆಯುವ ಹೋರಾಟವನ್ನು ವರದಿ ಮಾಡುವ ಸಲುವಾಗಿ ಖ್ಯಾತ ಪತ್ರಕರ್ತ, ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದ ಡ್ಯಾನಿಶ್ ಸಿದ್ಧಿಕಿ ಆಫ್ಘಾನಿಸ್ತಾನಕ್ಕೆ ತೆರಳುತ್ತಾರೆ. ಆ ಬಳಿಕ ಅಲ್ಲಿನ ರಾಷ್ಟ್ರೀಯ ಸೇವಾ ತಂಡದೊಂದಿಗೆ, ಹೋರಾಟದ ಸ್ಥಳಕ್ಕೆ ತೆರಳಿದ್ದಾಗ ಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ನಂಬಿದ್ದ ಎಲ್ಲರಿಗೂ ಶಾಕಿಂಗ್ ವಿಚಾರವೊಂದು ಈಗ ಬಹಿರಂಗವಾಗಿದೆ. ಆಕಸ್ಮಿಕವಾಗಿ ನಡೆದ ಅನಾಹುತ ಎಂದು ಪರಿಗಣಿಸಲಾಗಿದ್ದ ಈ ಪ್ರಕರಣ ಬೇರೊಂದು ತಿರುವನ್ನು ಪಡೆದುಕೊಂಡಿದ್ದು, ತನಿಖಾ ತಂಡದಿಂದ ದೊರೆತ ಮಾಹಿತಿಯ ಪ್ರಕಾರ ಸಿದ್ಧಿಕಿ ಉಗ್ರರಿಂದ ಕೊಲ್ಲಲ್ಪಟ್ಟಿದ್ದಾರೆ ಎಂಬುವುದು ಬಹಿರಂಗವಾಗಿದೆ.

ರಕ್ಷಣಾ ಪಡೆಗಳೊಂದಿಗೆ ವರದಿ ಮಾಡಲು ತೆರಳಿದ್ದ ಸಿದ್ಧಿಕಿ, ಅಲ್ಲಿ ನಡೆದ ಘರ್ಷಣೆ ಸಂದರ್ಭ ತಂಡದಿಂದ ಬೇರ್ಪಟ್ಟಾಗ ಈ ಘಟನೆ ನಡೆದಿದೆ. ತನ್ನನ್ನು ತಾನು, ರಕ್ಷಿಸಿಕೊಳ್ಳಲು ಸೆಣಸಾಡಿದ ಸಿದ್ಧಿಕಿಗೆ ಅಲ್ಲಿನ ಮಸೀದಿಯೊಂದರಲ್ಲಿ ಪ್ರಥಮ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ, ಓರ್ವ ಪತ್ರಕರ್ತ ಮಸೀದಿಯಲ್ಲಿದ್ದಾನೆ ಎಂಬ ಸುದ್ಧಿ ತಿಳಿದ ತಾಲಿಬಾನ್ ಉಗ್ರರು, ಮಸೀದಿಗೆ ಧಾವಿಸುತ್ತಾರೆ. ಅಲ್ಲಿ ಮಸೀದಿಗೆ ನುಗ್ಗಿ ದಾಳಿ ಮಾಡಿ ಈ ಕೊಲೆ ಈ ಘಟನೆ ನಡೆದಿದೆ ಎಂಬ ಸತ್ಯ ಈಗ ಹೊರಬಿದ್ದಿದೆ.

ಭಾರತದವರಾದ 58ವ ರ್ಷ ಪ್ರಾಯದ ಡ್ಯಾನಿಶ್ ಸಿದ್ಧಿಕಿ ಅವರ ಮೃತದೇಹವನ್ನು ಜುಲೈ 18ರಂದು ದೆಹಲಿಯ ಅವರ ನಿವಾಸಕ್ಕೆ ತಂದು ಕುಟುಂಬ ಸಹಿತ ಸಾರ್ವಜನಿಕರ ದರ್ಶನಕ್ಕಿಡಲಾಗಿತ್ತು. ಆ ಬಳಿಕ ಮಿಲಿಯಾ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಓರ್ವ ಖ್ಯಾತ ಪತ್ರಕರ್ತನನ್ನು ಕೊಲ್ಲಲಾಗಿದೆ. ಅದನ್ನು ಕೊಂದದ್ದು ಮುಸ್ಲಿಮರ ಎಂಬ ಸುದ್ದಿಯನ್ನು ಇಲ್ಲಿನ ಕೆಲ ಮತೀಯ ಏಕಮುಖ ಮಾಧ್ಯಮಗಳು ಪ್ರಸಾರ ಮಾಡಲು ಹಿಂಜರಿಯುತ್ತಿವೆ. ಏಕೆಂದರೆ, ತಮ್ಮ ಧರ್ಮದ ಉಗ್ರರೇ, ತಮ್ಮ ಧರ್ಮದವನನ್ನು ಕೊಂದಿದ್ದಾರೆ ಎಂಬುವುದು ಅವರಿಗೆ ತಿಳಿದಿದೆ. ಅದೇ ಈ ಕೊಲೆ ಗುಜರಾತ್ ನಲ್ಲಿ ನಡೆದಿದ್ದರೆ ಅಥವಾ ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲೂ ನಡೆದಿದ್ದರೆ, ಆಗ ಆ ಕೊಲೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರ ಹೊಣೆಯನ್ನಾಗಿಸುತ್ತಿದ್ದವು ಈ ಹಳದಿ ರೋಗದ ಮಾಧ್ಯಮಗಳು. ಇಲ್ಲಸಲ್ಲದದ್ದನ್ನು ಹೇಳಿ, ಹೇಳಿಸಿ, ಬರೆದು ತಮ್ಮಅಮಾಯಕ ಜನರನ್ನು ಬಾಯಿ ಮುಚ್ಚಿಸುತ್ತಿದ್ದವು.

ಆದರೆ ಈಗ ಈ ಮತೀಯ ಸಮುದಾಯ ಬಾಯಿಗೆ ದೊಡ್ಡ ಬಿರಡೆ ಬಡಿದುಕೊಂಡು ಕೂತಿವೆ. ಅವಕ್ಕೆ ಬಾಯಿ ತೆರೆಯಲು ಅವಕಾಶವಿಲ್ಲದಂತಾಗಿದೆ. ಮಾತೃದೇಶದಲ್ಲಿ ಹಿಂದೂ-ಮುಸ್ಲಿಂ ಒಬ್ಬರಿಗೊಬ್ಬರು ತಾಂಟ್ರೆ ಎಂದು ಹೇಳಿಕೆ ಕೊಡುವ ನರಿಗಳಿಗೆ, ಎಲ್ಲಾ ವಿಚಾರದಲ್ಲೂ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುವ ಕೆಲ ಬರಹಗಾರರಿಗೆ ತಮ್ಮವನನ್ನೇ, ತಮ್ಮವರು ಕೊಂದಿದ್ದಾರೆ ಎಂದಾಗ ಮಾತೇ ಬರುತ್ತಿಲ್ಲವೇನೋ ?
ಒಬ್ಬ ಹೆಸರಾಂತ ಪತ್ರಕರ್ತನ ಸಾವು, ಕೊಲೆಯೆಂದು ತಿಳಿದಾಗ ಈ ಮತೀಯ ಧೋರಣೆ ತೋರುವ ಮಾಧ್ಯಮಗಳು ಒಂದು ಸಂಪಾದಕೀಯ ಬರೆಯಲು ಕೂಡ ಪೆನ್ನು ಎತ್ತಿಲ್ಲ. ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಭಾರತದ ಮುಸ್ಲಿಂರಿಗೆ ಆಗಲೀ ಹಿಂದೂಗಳಿಗೆ ಆಗಲೀ ಅಥವಾ ಇನ್ಯಾವುದೇ ಧರ್ಮದವರಿಗೇ ಆಗಲೀ, ಅಗತ್ಯ ಬಿದ್ದಾಗ ಸಹಾಯಕ್ಕೆ ಎದ್ದು ಬರಬಲ್ಲವನು ‘ ಭಾರತೀಯರು’ ಮಾತ್ರ. ಆ ಭಾರತೀಯನಿಗೆ ಧರ್ಮದ ಹಂಗು ಇರುವುದಿಲ್ಲ. ಭಾರತದ ಮುಸ್ಲಿಂರ ಮೊದಲ ವೈರಿ ಯಾರಾದರೂ ಇದ್ದರೆ, ಅದು ತಾಲಿಬಾನಿ ಅಥವಾ ಮತಾಂಧ ಪಾಕಿಗಳು ಆಗಿರುತ್ತಾರೆ. ದ್ವೇಷಿಸುವುದಿದ್ದರೆ, ಅಲ್ಲಿಂದ ದ್ವೇಷ ಶುರು ಮಾಡೋಣ.

Leave A Reply

Your email address will not be published.