ಹಳದಿ ರೋಗದಿಂದ ತತ್ತರಿಸಿದ ಅಡಿಕೆ ಬೆಳೆಗಾರನಿಗೆ ಎಲೆ ಚುಕ್ಕೆ ರೋಗ ಮತ್ತೊಂದು ಶಾಕ್ | ಸಿಪಿಸಿಆರ್‌ಐ ವಿಜ್ಞಾನಿಗಳಿಂದ ಪರಿಶೀಲನೆ
ಸುಳ್ಯ: ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಕಂಗಾಲಾದ ಬೆನ್ನಲ್ಲೇ ಇದೀಗ ಸುಳ್ಯದ ಮರ್ಕಂಜದಲ್ಲಿ ಅಡಿಕೆ ಮರದ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದೆ.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಕಂಜಿಪಿಲಿ ಯತೀಶ ಎಂಬವರ ತೋಟಕ್ಕೆ ವಿಟ್ಲ ಸಿಪಿಸಿಆರ್ ವಿಜ್ಞಾನಿಗಳಾದ ಡಾ.ಶಿವಾಜಿ ತುಬೆ, ಡಾ.ಭವಿಷ್ಯರವರು ಭೇಟಿ ನೀಡಿ ಈ ಕುರಿತು ತಪಾಸಣೆ ನಡೆಸಿದ್ದಾರೆ.
ಮರದ ಸೋಗೆಯ ಕೆಳಭಾಗದಲ್ಲಿ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು ನಿಧಾನವಾಗಿ ಅವುಗಳ ಗಾತ್ರ ವಿಸ್ತರಿಸಲ್ಪಟ್ಟು, ಒಣಗಿ ತೂತುಗಳು ಉಂಟಾಗುತ್ತವೆ. ಅಂತಹ ಚುಕ್ಕೆ ತೂತುಗಳ ಸಂಖ್ಯೆ ತೀರಾ ಹೆಚ್ಚಾದಾಗ ಸೋಗೆ ಒಣಗಿದಂತೆ ಕಾಣಿಸುತ್ತದೆ. ಯಾವುದೇ ಪರಿಹಾರ ಕ್ರಮ ಕೈಗೊಳ್ಳದೇ ಇದ್ದರೆ ಮರ ಸಾಯಲೂ ಬಹುದು. ಇದು ಆಕ್ರಮಣಕಾರಿ ಶಿಲೀಂದ್ರವಾಗಿದ್ದು ಅತಿ ಶೀಘ್ರವಾಗಿ ಸುತ್ತಮುತ್ತ ಹರಡುವ ಸಾಧ್ಯತೆ ಇದೆ. ಆದ್ದರಿಂದ ಒಂದೆಡೆ ಈ ರೋಗ ಕಾಣಿಸಿಕೊಂಡರೆ ಇಡೀ ತೋಟ, ಜೊತೆಗೆ ಸುತ್ತ ಮುತ್ತಲಿನವರೂ ಈ ರೋಗದ ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳಬೇಕು ಎಂದು ಸಿ.ಪಿ.ಸಿ.ಆರ್.ಐ ವಿಜ್ಞಾನಿಗಳು ತಿಳಿಸಿದ್ದಾರೆ. ಅವರು ರೋಗ ನಿಯಂತ್ರಣದ ಪರಿಹಾರೋಪಾಯಗಳನ್ನು ಬೆಳೆಗಾರರಿಗೆ ಸಲಹೆ ಮಾಡಿದ್ದಾರೆ.
ಅಡಿಕೆ ಮರದ ಸೋಗೆಯ ಕೆಳಭಾಗದಲ್ಲಿ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು ನಿಧಾನವಾಗಿ ಅವುಗಳ ಗಾತ್ರ ವಿಸ್ತರಿಸಲ್ಪಟ್ಟು, ಒಣಗಿ ತೂತುಗಳು ಉಂಟಾಗುತ್ತವೆ.
*ಅಂತಹ ಚುಕ್ಕೆ, ತೂತುಗಳ ಸಂಖ್ಯೆ ತೀರಾ ಹೆಚ್ಚಾದಾಗ ಸೋಗೆ ಒಣಗಿದಂತೆ ಕಾಣಿಸುತ್ತದೆ.
*ಯಾವುದೇ ಪರಿಹಾರ ಕ್ರಮ ಕೈಗೊಳ್ಳದೇ ಇದ್ದರೆ ಮರ ಸಾಯಲೂ ಬಹುದು.