ದೇಶಭಕ್ತಿ-ಭಾವ ತುಂಬಿಕೊಂಡು ಹಾಡಿ ಆನ್ಲೈನ್ ದೇಶಭಕ್ತಿ ಗಾಯನ | ಸ್ವಾತಂತ್ರ್ಯೋತ್ಸವ ಪ್ರಯುಕ್ತ ಶಾಸಕ ಹರೀಶ್ ಪೂಂಜಾ ಅವರಿಂದ ವಿಜೇತರಿಗೆ 15,000 ರೂ. ಪ್ರೈಸ್ ಮತ್ತು ಎಲ್ಲರಿಗೂ ಸ್ಮರಣಿಕೆ

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಜನತೆಗೆ ಶಾಸಕ ಹರೀಶ್ ಪೂಂಜಾರವರು ಭರ್ಜರಿ ಆಫರ್ ಒಂದನ್ನು ನೀಡಿದ್ದಾರೆ.

 

ಶಾಸಕರು ತಮ್ಮ ಜನತೆಗಾಗಿ ಆನ್ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 10,000 ರೂ. ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ 5,000 ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ. ಹಾಗೆಯೇ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಸ್ಮರಣಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

ಮಕ್ಕಳಿಂದ ಹಿಡಿದು ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಸ್ಪರ್ಧಾರ್ಥಿಗಳು ಆಗಸ್ಟ್ 10 ರೊಳಗೆ +91 6366698524 ವಾಟ್ಸಾಪ್ ನಂಬರ್ ಗೆ ತಮ್ಮ ಹೆಸರು, ವಿಳಾಸ ಮತ್ತು ಆಧಾರಕಾರ್ಡ್ ನೊಂದಿಗೆ ರೆಕಾರ್ಡ್ ಮಾಡಿದ ವಿಡಿಯೋವನ್ನು ಕಳುಹಿಸಬೇಕು.

ಎಡಿಂಟಿಂಗ್ ಮಾಡಿದ ವಿಡಿಯೋವನ್ನು ಪರಿಗಣಿಸಲಾಗುವುದಿಲ್ಲ ಹಾಗೂ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ ಎಂಬ ಷರತ್ತನ್ನು ಕೂಡ ಹಾಕಲಾಗಿದೆ.

Leave A Reply

Your email address will not be published.