ಸಿರಿಬಾಗಿಲು : ತೋಟಕ್ಕೆ ಕಾಡಾನೆ ದಾಳಿಯಿಂದ ತೆಂಗು, ಅಡಿಕೆ ಕೃಷಿಗೆ ಹಾನಿ
ಕಡಬ : ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ತೋಟವೊಂದಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿ ಮಾಡಿದೆ.
ಸಿರಿಬಾಗಿಲು ಗ್ರಾಮದ ದೇರಣೆ ಮಾತಿಜಾಲು ನಿವಾಸಿ ಎಚ್.ಸಿ.ರುಕ್ಮಯ್ಯ ಅವರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ಮಾಡಿ ತೆಂಗು ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿವೆ.
ಕಳೆದ ರಾತ್ರಿ ನಡೆದ ಘಟನೆ, ಇವರ ತೋಟಕ್ಕೆ ಏಳು ತಿಂಗಳ ಹಿಂದೆ ಕಾಡಾನೆ ದಾಳಿ ನಡೆಸಿ ಸುಮಾರು ನೂರಕ್ಕು ಹೆಚ್ಚು ಅಡಿಕೆ ಸಸಿಗಳನ್ನು ಪುಡಿಗೈದಿದೆ. ಅದೇ ಜಾಗದಲ್ಲಿ ಹಾಗೂ ಪಕ್ಕದ ಜಾಗದಲ್ಲಿ ಮತ್ತೆ ಗಿಡ ನೆಟ್ಟಿದ್ದಾರೆ ಮತ್ತೆ ಕಾಡಾನೆ ದಾಳಿ ನಡೆಸಿ ಎಲ್ಲಾ ಗಿಡಗಳನ್ನು ಪುಡಿಗೈದಿದೆ. ಈ ಹಿಂದೆ ನಡೆದ ಘಟನೆ ಬಗ್ಗೆ ಅರಣ್ಯ ಇಲಾಖೆ ಪರಿಶೀಲನೆ ನಡೆಸಿದೆ. ಈಬಗ್ಗೆ ಪರಿಹಾರ ಮೊತ್ತವಾಗಿ ಸುಮಾರು 35 ಸಾವಿರ ರೂ ನೀಡುವುದಾಗಿ ಭರವಸೆ ಸಿಕ್ಕಿದೆ , ಇದುವರೆಗೆ ಮೊತ್ತ ಕೈ ಸೇರಲಿಲ್ಲ. ಕಳೆದ ರಾತ್ರಿಯ ಘಟನೆ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಲಾಯಿತಾದರೂ ಇದುವರೆಗೆ ಅಧಿಕಾರಿಗಳು ಬಂದಿಲ್ಲ ಎನ್ನುವ ಅರೋಪ ವ್ಯಕ್ತವಾಗಿದೆ. ಸ್ಥಳಕ್ಕೆ ಕೊಂಬಾರು ಗ್ರಾ.ಪಂ ಸದಸ್ಯ ಗಣೇಶ್ ಭೇಟಿ ನೀಡಿದ್ದಾರೆ.
ಈ ಭಾಗದಲ್ಲಿ ಕೃಷಿ ತೋಟಗಳಿಗೆ ನಿರಂತರ ಆನೆ ಹಾಗೂ ಇನ್ನಿತರ ಕಾಡು ಪ್ರಾಣಿ ದಾಳಿ ಮಾಡುತ್ತಿದ್ದು ಕೂಡಲೇ ಕೃಷಿಕರ ರಕ್ಷಣೆ ಮಾಡಿ ಸೂಕ್ತ ಪರಿಹಾರ ಹಾಗೂ ಶಾಶ್ವತ ತಡೆಗೋಡೆ ವ್ಯವಸ್ಥೆ ಮಾಡುವಂತೆ ಕೃಷಿಕರು ಒತ್ತಾಯಿಸಿದ್ದಾರೆ.