ಬಸ್ ಮೇಲೆ ಕೇಕೆ ಹಾಕುತ್ತಾ ಸವಾರಿ ಮಾಡುತ್ತಿದ್ದ ಜನ | ಬಸ್ ಬ್ರೇಕ್ ಹಾಕಿದ ತಕ್ಷಣ ಪತ ಪತ ಕೆಳಕ್ಕೆ ಉದುರಿದ ವೈರಲ್ ವಿಡಿಯೋ !

ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ಅಚ್ಚರಿಯ, ಅಪರೂಪದ ವಿಡಿಯೋಗಳು ಮತ್ತು ಸಂಗತಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೆ ನೀವು ಬೆಚ್ಚಿಬೀಳಬಹುದು.

 

ಈ ವಿಡಿಯೋ ನೋಡಿ ನಿಮಗೆ ನಗು ಬರಬಹುದು. ಅದಕ್ಕಿಂತ ಹೆಚ್ಚಾಗಿ ಇದು ದೊಡ್ಡ ಪಾಠ ಕಲಿಸುವ ವಿಡಿಯೋ ಕೂಡಾ. ಈ ವಿಡಿಯೋದಲ್ಲಿ ಜನರ ಗುಂಪೊಂದು ಬಸ್ ಮೇಲ್ಛಾವಣಿಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಸವಾರಿ ಮಾಡುತ್ತಿರುವ ಜನರು ತುಂಬಾ ಖುಷಿಯಿಂದ ಕೇಕೆ ಕೂಡ ಹಾಕುತ್ತಿದ್ದಾರೆ. ಅಷ್ಟರಲ್ಲಿ ಬಸ್ಸಿನ ಮುಂದೆ ಹೋಗುತ್ತಿದ್ದ ಬೈಕು ಸ್ಲೋ ಆಗುತ್ತದೆ. ಆಗ ಬಸ್ ಡ್ರೈವರ್ ಬ್ರೇಕ್ ಹಾಕುತ್ತಾನೆ. ತಕ್ಷಣ ಬಸ್ ಮೇಲ್ಛಾವಣಿಯ ಮೇಲೆ ಕುಳಿತ ಜನರು ಕೆಳಗೆ ಉದುರಿ ಬೀಳುತ್ತಾರೆ.

https://twitter.com/rupin1992/status/1418811851236855811?s=20

ಈ ರೀತಿ ಬಸ್ ಮೇಲೆ ಕೂತು ಸವಾರಿ ಮಾಡುವುದು ಎಷ್ಟೊಂದು ಅಪಾಯಕಾರಿ ಎಂಬುದನ್ನು ನೀವು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ವಿಡಿಯೋದಲ್ಲಿ ರಸ್ತೆ ಮಧ್ಯದಿಂದ ಬಸ್ ವೊಂದು ವೇಗವಾಗಿ ಸಂಚರಿಸುತ್ತಿದ್ದು, ಅದರ ಮೇಲ್ಛಾವಣಿಯ ಮೇಲೆ ಬಸ್ ಮುಂಭಾಗದಲ್ಲಿ ಜನರ ಗುಂಪೊಂದು ಕುಳಿತು ಕೇಕೆ ಹಾಕುತ್ತಿದೆ. ಏತನ್ಮಧ್ಯೆ ಬಸ್ ಡ್ರೈವರ್ ಆಕಸ್ಮಿಕವಾಗಿ ಬಸ್ ಗೆ ಬ್ರೇಕ್ ಹಾಕುತ್ತಾನೆ. ಬ್ರೇಕ್ ಹಾಕುತ್ತಿದ್ದಂತೆ ಬಸ್ ಮೇಲೆ ಕುಳಿತ ಜನರು ಬಿರಿ ಬಿರಿ ಉದುರಿ ಒಬ್ಬರ ಮೇಲೊಬ್ಬರು ದಪಾ ದಪಾ ಕೆಳಕ್ಕೆ ಬೀಳುತ್ತಾರೆ. ಇದರಲ್ಲಿ ಹಲವು ಜನರಿಗೆ ಗಾಯಗಳಾಗುತ್ತವೆ. ಅಷ್ಟೇ ಅಲ್ಲ ಬಸ್ ಮುಂದೆ ಹೋಗುತ್ತಿದ್ದ ಬೈಕ್ ಸವಾರರಿಗೂ ಕೂಡ ಈ ಘಟನೆಯಿಂದ ಗಾಯಗಳಾಗಿವೆ.

IPS ರುಪಿನ್ ಶರ್ಮಾ ಎಂಬವರ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಅಪ್ಲೋಡ್ ಮಾಡಿದ ಅವರು ‘ಎಚ್ಚರಿಕೆ, ಬಸ್ ಮೇಲ್ಛಾವಣಿ ಮೇಲೆ ಕುಳಿತು ಪ್ರಯಾಣ ಮಾಡಬೇಡಿ’ ಎಂದು ಬರೆದಿದ್ದಾರೆ. ಬಸ್ ತುಂಬಾ ವೇಗವಾಗಿ ಚಲಿಸುತ್ತಿದ್ದ ಕಾರಣ ಜನರ ಜೀವ ಉಳಿದಿದೆ. ವೇಗವಾಗಿ ಬಸ್ಸು ಚಲಿಸುತ್ತಿದ್ದರೆ ಗತಿಯೇನು ಒಮ್ಮೆ ಯೋಚಿಸಿ.

Leave A Reply

Your email address will not be published.