ರಾಜ್ಯ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರ ,ಸದಸ್ಯರ ನೇಮಕ

Share the Article

ರಾಜ್ಯ ಸರಕಾರ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಇಂದು ಆದೇಶ ಹೊರಡಿಸಿದೆ. ಹಿರಿಯ ಪತ್ರಕರ್ತ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷರೂ ಆಗಿರುವ ಸದಾಶಿವ ಶೆಣೈ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಆದೇಶ ಹೊರಬಿದ್ದ ಬೆನ್ನಲ್ಲೆ ಸದಾಶಿವ ಶೆಣೈ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

ಸದಸ್ಯರಾಗಿ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಮತ್ತು ಮಲೆನಾಡು ಭಾಗದ ಸೂಕ್ಷ್ಮ ಸಂವೇದನೆಯ ವರದಿಗಾರ, ಲೇಖಕ ಗೋಪಾಲ್ ಯಡಗೆರೆ ,ಹಿರಿಯ ಪತ್ರಕರ್ತ ಮಲೆನಾಡು ಭಾಗದ ಕೆ ಕೆ ಮೂರ್ತಿ ಮತ್ತು ಶಿವಕುಮಾರ ಬೆಳ್ಳಿತಟ್ಟೆ ,ಕೆಯುಡಬ್ಲ್ಯುಜೆ ಪ್ರತಿನಿಧಿಗಳಾಗಿ ಅಧ್ಯಕ್ಷರಾದ ಶಿವಾನಂದ ತಗಡೂರು, ಮೈಸೂರಿನ ಸಿ. ಕೆ ಮಹೇಂದರ್,ಮಂಗಳೂರಿನ ಜಗನ್ನಾಥ ಶೆಟ್ಟಿ ಬಾಳ, ಕಲಬುರ್ಗಿಯ ದೇವೇಂದ್ರಪ್ಪ ಕಪನೂರು ಮತ್ತು ಶಿವಮೊಗ್ಗದ ಕೆ.ವಿ ಶಿವಕುಮಾರ್ ನೇಮಕವಾಗಿದ್ದಾರೆ.

Leave A Reply