ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆ ಉದ್ಘಾಟನೆ,ಅಗಲಿದ ನಾಯಕರಿಗೆ,ಕಾರ್ಗಿಲ್ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಸುಳ್ಯ : ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆಯು ಜುಲೈ 26 ರಂದು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನ ದಲ್ಲಿ ನಡೆಯಿತು.

 

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ,

ನರೇಂದ್ರ ಮೋದಿ ಅವರ ಸದೃಢ ನೇತೃತ್ವದಿಂದಾಗಿ ಭಾರತ ಬಲಿಷ್ಠ ರಾಷ್ಟ್ರವಾಗಿ ಜಗತ್ತಿನಲ್ಲಿ ತಲೆ ಎತ್ತಿ ನಿಂತಿದೆ. ಕಳೆದ ಏಳು ವರ್ಷದಲ್ಲಿ ಹಲವಾರು ಸವಾಲುಗಳ ಮಧ್ಯೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತವನ್ನು ನೀಡಿದೆ.

ದೇಶವನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಮಾಡಿದೆ. ದೇಶದ ರಥವನ್ನು ಎಳೆಯಲು ಇಡೀ ದೇಶವೇ ನರೇಂದ್ರ ಮೋದಿಯವರ ಜೊತೆ ಕೈ ಜೋಡಿಸಿದ್ದಾರೆ.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಬೇಕು ಎಂದು ಹಲವಾರು ಬದಲಾವಣೆಗಳನ್ನು ತಂದಿದೆ. ಕೇಂದ್ರ ಸರಕಾರದ ಮಹತ್ವದ ಸಾಧನೆ, ರಾಜ್ಯ ಸರಕಾರದ ಯಶಸ್ವೀ ಆಡಳಿತದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಾಗಿದೆ. ಆ ಮೂಲಕ ಎರಡನೇ ಬಾರಿ ರಾಜ್ಯದಲ್ಲಿ ಬಿಜೆಪಿ ಸರಕಾರ, ಮೂರನೇ ಬಾರಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಬೇಕು ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್,ಜಿಲ್ಲೆಯ ಸಹ ಪ್ರಭಾರಿ ರಾಜೇಶ್ ಕಾಗೇರಿ ಉಪಸ್ಥಿತರಿದ್ದರು.

ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಜಯರಾಮ ರೈ,ಧರ್ಮಪಾಲ ರಾವ್,ಮುಳಿಯ ಕೇಶವ ಭಟ್,ಭಾಗೀರಥಿ ಮರುಳ್ಯ ಅತಿಥಿಗಳನ್ನು ಗೌರವಿಸಿದರು.

ಅಜಿತ್ ರಾವ್ ಕಿಲಂಗೋಡಿ ಅವರು ಅಗಲಿದ ನಾಯಕರಾದ ಸತ್ಯನಾರಾಯಣ ಕೋಡಿಬೈಲು,ಸೀತಾರಾಮ ಗೌಡ ಕೋಡಿಂಬಾಳ ,ಹರ್ಷೇಂದ್ರ ಜೈನ್,ವಸಂತ ಭಟ್ ತೊಡಿಕಾನ,ಬಾಬು ಭಂಡಾರಿ ಬೆಳ್ಳಾರೆ,ನವೀನ್ ಕುಮಾರ್ ರೈ ಕುಂಜಾಡಿ,ಯಕ್ಷಗಾನ‌ ಕಲಾವಿದ ಸಂಪಾಜೆ ಶೀನಪ್ಪ ರೈ ಹಾಗೂ ಕೊರೊನಾದಿಂದ ಮೃಪಟ್ಟವರಿಗೆ ,ಕಾರ್ಗಿಲ್ ಹುತಾತ್ಮ ವೀರಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಸ್ವಾಗತಿಸಿದರು. ಕಾರ್ಯದರ್ಶಿ ಇಂದಿರಾ ಬಿ.ಕೆ. ವಂದಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.

ಈ ಸಭೆಯಲ್ಲಿ ಮಂಡಲದ ಪದಾಧಿಕಾರಿಗಳು, ಸದಸ್ಯರು, ವಿಶೇಷ ಆಹ್ವಾನಿತರು, ಮಂಡಲದ ಮೋರ್ಚಾಗಳ ಅಧ್ಯಕ್ಷ ಪ್ರಧಾನ
ಕಾರ್ಯದರ್ಶಿಗಳು, ಮಂಡಲದ ಪ್ರಕೋಷ್ಠಗಳ ಸಂಚಾಲಕ ಸಹ
ಸಂಚಾಲಕರು, ರಾಜ್ಯದ ಪದಾಧಿಕಾರಿಗಳು, ರಾಜ್ಯ ಕಾರ್ಯಕಾರಿಣಿ ಸದಸ್ಯರು,ರಾಜ್ಯದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ವಿವಿಧ ಪ್ರಕೋಷ್ಠಗಳ ಸಂಚಾಲಕರು ಸಹ ಸಂಚಾಲಕರು, ಮಂಡಲದಲ್ಲಿರುವ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಸಮಿತಿ ಸದಸ್ಯರು, ಜಿಲ್ಲೆಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ನ ನಿಕಟಪೂರ್ವ ಸದಸ್ಯರು,ಗ್ರಾಮ ಪಂಚಾಯತ್ ಅಧ್ಯಕ್ಷರುಗಳು,ಪ್ರಾ.ಕೃ.ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಮಹಾಶಕ್ತಿಕೇಂದ್ರಗಳ ಅಧ್ಯಕ್ಷ ಕಾರ್ಯದರ್ಶಿಗಳು, ಶಕ್ತಿಕೇಂದ್ರ ಪ್ರಮುಖರು ಮಂಡಲದ ಸಾಮಾಜಿಕ ಜಾಲತಾಣದ ಸದಸ್ಯರು ಭಾಗವಹಿಸಿದ್ದರು.

Leave A Reply

Your email address will not be published.