ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳು ಯುವತಿಯ ಯತ್ನ | ಪೊಲೀಸ್ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆ, ಯುವತಿಯ ರಕ್ಷಣೆ
ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು CISF ಪೊಲೀಸ್ ತಕ್ಷಣ ಕಾರ್ಯಪ್ರವೃತ್ತರಾಗೋ ಮೂಲಕ ರಕ್ಷಿಸಲಾಗಿದೆ.
ಈ ಘಟನೆ ದೆಹಲಿ ಫರಿದಾಬಾದ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮಾನಸಿಕವಾಗಿ ನೊಂದಿದ್ದ ಯವತಿ ಫರೀದಾಬಾದ್ ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಯುವತಿಯ ಗಮನಿಸಿದ ಮೆಟ್ರೋ ಸಿಬ್ಬಂದಿಗಳು ಮನವೋಲಿಸುವ ಯತ್ನ ಮಾಡಿದ್ದಾರೆ. ಆದರೆ ಈ ಮನವಿಗೆ ಯುವತಿ ಸೊಪ್ಪು ಹಾಕಿಲ್ಲ.
ಕಟ್ಟಡದ ಅಂಚಿನಲ್ಲಿ ಕುಳಿತು ಕೆಳಕ್ಕೆ ಹಾರಲು ತಯಾರಿ ಮಾಡಿಕೊಂಡಿದ್ದಾಳೆ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್( CISF) ಪೊಲೀಸ್ ಕಟ್ಟದ ಮತ್ತೊಂದು ಬದಿಯಿಂದ ನೇರವಾಗಿ ಯುವತಿ ಬಳಿ ಬಂದು ತಕ್ಷಣ ಹಿಡಿದಿದ್ದಾರೆ. ಈ ವೇಳೆ ಮೆಟ್ರೋ ಸಿಬ್ಬಂದಿ ಕೂಡ ಯುವತಿಯನ್ನು ಹಿಡಿದು ಆತ್ಮಹತ್ಯೆಯಿಂದ ರಕ್ಷಿಸಿದ್ದಾರೆ.
ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಕೌನ್ಸ್ಲಿಂಗ್ ಕೇಂದ್ರಕ್ಕೆ ಕಳುಹಿಸಿದ್ದಾರೆ. ಯುವತಿಗೆ ಕೌನ್ಸಲಿಂಗ್ ನೀಡಿದ ಅಧಿಕಾರಿಗಳು ಬಳಿಕ ಯುವತಿ ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
CISF ಪೊಲೀಸ್ ಪೆದೆ ಸರ್ಫರಾಜ್ ಸಾಹಸಕ್ಕೆ ಪೊಲೀಸ್ ಕಮೀಶನರ್ ಒಪಿ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುವತಿ ಆತ್ಮಹತ್ಯೆ ಪ್ರಸಂಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.